ಗಣಪತಿ ಮೇಲೆ ಕಲ್ಲು ಎಸೆದರೆ ಅವರ ಮೇಲೆ ಬುಲ್ಡೋಜರ್ ಹಾಕುವ ಮುಖ್ಯಮಂತ್ರಿ ಇರಬೇಕು: ಶಾಸಕ ಯತ್ನಾಳ
ವಿಜಯಪುರ,ಸೆ.15: ಹಿಂದುಗಳ ಪವಿತ್ರ ಹಬ್ಬವಾದ ಗಣಪತಿ ವಿಸರ್ಜನೆ ಮೆರವಣಿಯನ್ನು ಸಹಿಸುವ ಶಕ್ತಿ ಕೆಲವರಿಗೆ ಇಲ್ಲ. ಇಲ್ಲಿ ಮೋದಿ ಮತ್ತು ಯೋಗಿ ಇರುವವರೆಗೂ ನೀವಿಲ್ಲಿ ಬಾಲ ಬಿಚ್ಚಲಾಗಲ್ಲ. ಇಲ್ಲಿ ಇರಬೇಕೆಂದರೇ ಚಂದಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇಶ ವಿರೋಧಿ, ಧರ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಸರ್ದಾರ ವಲ್ಲಭಬಾಯಿ ಪಟೇಲ್ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ 7ನೇ ದಿನ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೂ ಮುಂದೆ ನಾವೆಲ್ಲ ಒಂದಾಗಿರಬೇಕು. ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಇಲ್ಲದೆ ಇಡುವಂತ ಹಾಗೂ ಗಣಪತಿ ಮೇಲೆ ಕಲ್ಲು ಹಾಕಿದರೆ ಅವರ ಮೇಲೆ ಬುಲ್ಡೋಜರ್ ಹಾಕೋ ಮುಖ್ಯಮಂತ್ರಿ ಬೇಕು. ಇದು ಶಿವಾಜಿ ಮಹಾರಾಜರ ನೆಲವಿದು. ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಾವು ವಿಜಯಪುರದಲ್ಲಿ ಆವಾಜ್ ಹಾಕಿದ್ದಕ್ಕೆ ಇಡೀ ಕರ್ನಾಟಕದಲ್ಲಿ ಡಿಜೆ ಹಾಕುವಂತಾಯಿತು. ಹಿಂದೆ ಬನಾಯೇಂಗೆ ಮಂದಿರ ಹಾಡನ್ನು ನಿಷೇಧ ಮಾಡಿದ್ದನ್ನು ಬಿಡಲಿಲ್ಲ, ಹೀಗಾಗಿ ರಾಮಮಂದಿರ ಹಾಡಿನ ನಿಷೇಧ ತೆರವಾಯಿತು ಎಂದು ಹೇಳಿದರು.
ನಾಗಮಂಗಲದಲ್ಲಿ ಗಣೇಶ ಉತ್ಸವದಲ್ಲಿ ನಡೆದ ಘಟನೆ ಗಮನಿಸಿದರೆ, ಈ ಸರ್ಕಾರ ಬಹಳ ದಿನ ಬದುಕಲ್ಲ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಾವೇ ಬರುತ್ತೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ತಂತ್ರ ಮಾಡಿದರು. ಕೆಲವರು ಚುನಾವಣೆ ಹೆಸರಲ್ಲಿ ಕಾರು ತೆಗೆದುಕೊಂಡರು, ಜಮೀನಿನಲ್ಲಿ ಬೋರ್ ವೆಲ್ಲ ಹಾಕಿಸಿದರು. ನಕಲಿ ಮತದಾನ ಮಾಡಿದ್ದೇನೆಂದು ಆರೋಪಿಸಿ ನ್ಯಾಯಲಯದ ಮೊರೆ ಹೋಗಿ, ತಾನೇ ದಂಡ ಹಾಕಿಸಿಕೊಂಡ ಎಂದು ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವಾಗಿ ಕೊಲೆಯಾದರೂ ಅಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮರುಕ ವ್ಯಕ್ತಪಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬದಲಾಗಿ ಹಿಂದುವೋಂಕೆ ಸಾತ್, ಹಿಂದೂವೋಂಕೆ ವಿಕಾಸ್ ಎಂದು ನಾವು ಮಾಡುತ್ತೇವೆ. ನಾವೇಲ್ಲ ಗಟ್ಟಿ ಇದ್ದೇವೆ.
ಬಸನಗೌಡ ಪಾಟೀಲ ಯತ್ನಾಳ, ಶಾಸಕರು