ಗಣೇಶ ಮೂರ್ತಿಗಳ ವೈಭವದ ಮೆರವಣಿಗೆ ವಿಸರ್ಜನೆ
ತಾಳಿಕೋಟೆ:ಸೆ.೧೫: ಪಟ್ಟಣದಲ್ಲಿ ಕೂಡ್ರಿಸಲಾದ ಗಣೇಶ ಮೂರ್ತಿಗಳಲ್ಲಿ ೭ನೇ ದಿನದಂದು ವಿಸರ್ಜಿಸಲು ನಿರ್ಧರಿಸಲಾದ ಸುಮಾರು ೧೦ ಗಣೇಶ ಮೂರ್ತಿಗಳನ್ನು ವಿವಿಧ ವಾಧ್ಯಮ ಮೇಳಗಳೊಂದಿಗೆ ಪಟ್ಟಣದಲ್ಲಿ ವೈಭವಪೂರಿತವಾಗಿ ಮೇರವಣಿಗೆ ಮಾಡುವದರೊಂದಿಗೆ ಶುಕ್ರವಾರರಂದು ವಿಸರ್ಜಿಸಲಾಯಿತು.
ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಮೇರವಣಿಗೆಯ ಮೂಲಕ ರಾಜವಾಡೆಗೆ ಆಗಮಿಸಿದವಲ್ಲದೇ ನಂತರ ರಾಜವಾಡೆಯಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮವನ್ನು ನೇರವೇರಿಸಿ ವಿಸರ್ಜನಾ ಮೇರವಣಿಗೆಗೆ ಚಾಲನೆ ನೀಡಲಾಯಿತು.
ಮೇರವಣಿಗೆಯ ಯುದ್ದಕ್ಕೂ ಡಿಜೆ ನಾದದ ವಿವಿಧ ಗೀತೆಗಳಿಗೆ ಯುವಕರು ಹೆಜ್ಜೆ ಹಾಕುವದರೊಂದಿಗೆ ಕುಣಿದು ಕುಪ್ಪಳಿಸಿದರು.
ಇದೇ ಸಮಯದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪಿಎಸ್‌ಐ ರಾಮನಗೌಡ ಸಂಕನಾಳ ಹಾಗೂ ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಅವರು ಪರಿಸರ ಪೂರಕ ಅಲಂಕರಾಕ ಗಣೇಶ ಮೂರ್ತಿಗಳಿಗೆ ಭಹುಮಾನ ವಿತರಿಸಿದರು.