ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟ ಸಂಜೆವಾಣಿ ಕಾರ್ಯ ಶ್ಲಾಘನೀಯ: ರಾಧಾ ಬೆಹೆನ್ ಜೀ
ಬೀದರ್:ಸೆ.15: 1982 ರಿಂದ ಸುಮಾರು 42 ವರ್ಷಗಳಿಂದ ಸಂಜೆವಾಣಿ ದಿನಪತ್ರಿಕೆ ರಾಜ್ಯದ ಜನರ ಮನೆಮನಗಳ ಬಾಗಿಲಿಗೆ ಸಕಾರಾತ್ಮಕ ಸುದ್ದಿಗಳನ್ನು ನೀಡುತ್ತ ಬಂದಿದೆ. ಇದೀಗ ದೃಶ್ಯ ಮಾಧ್ಯಮಕ್ಕೆ ದಾಪುಗಾಲಿಟ್ಟು ನಿತ್ಯೋತ್ಸವದಂತೆ ದಿನನಿತ್ಯದ ಸುದ್ದಿಗಳನ್ನು ವಿದ್ಯುನ್ಮಾನ ಚಾನೆಲ್ ಮೂಲಕವೂ ಸುದ್ದಿ ನೀಡಲು ಸಜ್ಜಾಗಿರುವ ಸಂಜೆವಾಣಿ ಕಾರ್ಯ ಶ್ಲಾಘನೀಯ. ಈ ದೃಶ್ಯ ಮಾಧ್ಯಮವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಭಾಲ್ಕಿಯ ಬ್ರಹ್ಮಾಕುಮಾರಿ ಕೇಂದ್ರದ ಬಿ.ಕೆ. ರಾಧಾ ಬೆಹೆನ್ ಜೀ ಶುಭ ಹಾರೈಸಿದರು.
ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪಾವನಧಾಮ ಕೇಂದ್ರದ ಸಭಾಂಗಣದಲ್ಲಿ ಸಂಜೆವಾಣಿ ನ್ಯೂಜ್ ಚಾನೆಲ್ ನ ಲೋಗೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಬೀದರ ಬ್ರಹ್ಮಾಕುಮಾರಿ ಪಾವನಧಾಮ ಕೇಂದ್ರದ ಬಿಕೆ ಗುರುದೇವಿ ಬೆಹೆನ್ ಜೀ ಮಾತನಾಡಿ ಬಡವರು, ತುಳಿತಕ್ಕೊಳಗಾದವರು, ಶೋಷಿತರು, ದುರ್ಬಲರು, ಅನ್ಯಾಯಕ್ಕೊಳಗಾದವರು ಹಾಗೂ ನೊಂದವರ ಧ್ವನಿಯಾಗಿ ಸಂಜೆವಾಣಿ ನ್ಯೂಜ್ ಚಾನೆಲ್ ಕಾರ್ಯ ಮಾಡಲಿ. ಮುದ್ರಣ ಮಾಧ್ಯಮದಂತೆ ದೃಶ್ಯ ಮಾಧ್ಯಮವೂ ಜನರ ಎದೆಗಿಳಿದು, ಜನರ ಸಮಸ್ಯೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಕಾರ್ಯ. ಸಂಜೆವಾಣಿ ನ್ಯೂಜ್ ಎತ್ತರಕೆ ಬೆಳೆಯಲಿ ಎಂದರು.
ಇದೇ ವೇಳೆ ಬಿಕೆ ಪ್ರಭಾಕರ ಭಾಯಿ, ಬಿಕೆ ಮಂಗಲಾ ಬೆಹೆನ್ ಜೀ ಶುಭ ಹಾರೈಸಿದರು.
ಸಂಜೆವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಶಿವಕುಮಾರ ಸ್ವಾಮಿ ಮಾತನಾಡಿ ದೃಶ್ಯ ಮಾಧ್ಯಮದ ಮೂಲಕ ಸುದ್ದಿ ಬಿತ್ತರಿಸಲು ಅವಕಾಶ ಮಾಡಿಕೊಟ್ಟ ವ್ಯವಸ್ಥಾಪಕ ನಿರ್ದೇಶಕ
ಬಿ.ಟಿ.ಅಮುಧಾನ್,
ನಿರ್ದೇಶಕ ಶ್ರೀಸುಂದರ
ರಾಜ್ಯ ಅಕೌಂಟೆಂಟ್ ಕೃಷ್ಣ,
ಸ್ಥಾನಿಕ ಸಂಪಾದಕ ಟಿ. ಗಣೇಶಕುಮಾರ ಸೇರಿದಂತೆ ಸಂಜೆವಾಣಿ ಸಮೂಹದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಲೋಗೋ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ರೇವಣಯ್ಯ ಸ್ವಾಮಿ, ಸಂಜೆವಾಣಿ ದಿನಪತ್ರಿಕೆ ಎಕ್ಸಿಕ್ಯುಟಿವ್ ಶ್ರೀಕಾಂತ ಪಾಟೀಲ, ಪತ್ರಕರ್ತ ಮಹಾರುದ್ರ ಡಾಕುಳಗೆ, ಕಾರ್ತಿಕ ಸ್ವಾಮಿ ಮಠಪತಿ, ಗೋಪಿಚಂದ ತಾಂದಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.