ದಾವಣಗೆರೆ ಮುರಿಗೆಪ್ಪ ಚಿಗಟೇರಿ  ಮನೆತನಕ್ಕೆ  “ದಾಸೋಹ ರತ್ನ ” ಪ್ರಶಸ್ತಿ
ಸಂಜೆವಾಣಿ ವಾರ್ತೆ
ಬೆಂಗಳೂರು. ಸೆ.15: ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆದ ಡಾ. ಬಿ ಡಿ ಜತ್ತಿ ಅವರ 112ನೇ ಜನ್ಮದಿನಾಚರಣೆ ಮತ್ತು ಬಸವ ಸಮಿತಿ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಕೊಡಗೈ ದಾನಿಗಳಾದ ದಾವಣಗೆರೆ ಮುರಿಗೆಪ್ಪ ಚಿಗಟೇರಿ ಮನೆತನದ ಸಮಾಜ ಸೇವೆ, ದಾಸೋಹವನ್ನು ಪರಿಗಣಿಸಿ  ಬೆಂಗಳೂರಿನ ಬಸವ ಸಮಿತಿಯು “ದಾಸೋಹ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಚಿಗಟೇರಿ ಕುಟುಂಬದ  ಪರವಾಗಿ  ಶ್ರೀಮತಿ ಸುಧಾ ಜಯಪ್ರಕಾಶ್ ಮತ್ತು ಮುರುಘ ರಾಜೇಂದ್ರ ಜೆ ಚಿಗಟೇರಿ ಅವರಿಗೆ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ “ದಾಸೋಹ ರತ್ನ” ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದ ಸಾನಿಧ್ಯವನ್ನು ಬೇಲಿ ಮಠಾಧ್ಯಕ್ಷರಾದ  ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳು  ವಹಿಸಿದ್ದು.  ಬಸವ ಸಮಿತಿಯ  ಅಧ್ಯಕ್ಷರಾದ  ಡಾ. ಅರವಿಂದ್ ಜತ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು.  ಉದ್ಘಾಟಕರಾಗಿ  ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ,  ಮುಖ್ಯ ಅತಿಥಿಗಳಾಗಿ  ವೀರಶೈವ ಲಿಂಗಾಯತ ಅಭಿವೃದ್ಧಿ  ನಿಗಮದ ಮಾಜಿ ಅಧ್ಯಕ್ಷರಾದ ಬಿ.ಎಸ್ ಪರಮಶಿವಯ್ಯ ಹಾಗೂ  ವಿಧಾನ ಸಭಾಧ್ಯಕ್ಷರಾದ ಯು ಟಿ. ಖಾದರ್.  ಪ್ರಭುದೇವ್ ಚಿಗಟೇರಿ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.