ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಗಮನ ಸೆಳೆದ ಬಿದಿರಿನ ಕಲೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೫; ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ವಿಶೇಷವಾಗಿ ಭಾಗಿಯಾಗಿ ಗಮನ ಸೆಳೆದ ಮೇದಾರ್ ಜನಾಂಗದವರು. ಹೊನ್ನಾಳಿಯಲ್ಲಿ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಭಾಗಿಯಾದ ಮೇದಾರ್ ಜನಾಂಗದವರು ತಮ್ಮ ಕಸುಬು ನಿಂದ ಮಾಡಿದ ಬಿದರಿನ ವಸ್ತುಗಳ ಜೊತೆ ಬಂದು ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು. ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆ ಆದಿವಾಸಿ ರಕ್ಷಣಾ ಪರಿಷತ್ (ರಿ) ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿಕುಮಾರ್ ಮೇದಾರ್ ಅವರ ನೇತೃತ್ವದಲ್ಲಿ ಸಮಾಜದ ಮುಖಂಡರು ಭಾಗಿಯಾಗಿದ್ದರು. ಮೂಲ ಕಸುಬಾದ ಬಿದರಿನ ಸಾಮಗ್ರಿ ಗಳನ್ನು ಸಿದ್ದಪಡಿಸಿಕೊಂಡು ಬಂದು ಪ್ರಜಾಪ್ರಭುತ್ವ ದಿನಾಚರಣೆಯಯಲ್ಲಿ ಭಾಗಿಯಾಗಿ ಗಮನ ಸೆಳೆದರು. ಹೊನ್ನಾಳಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಬಂದ ಮೇದಾರ್ ಜನಾಂಗದವರು ವಿಶೇಷ ಎನಿಸಿದರು. ಈ ವೇಳೆ ಮಾತನಾಡಿದ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಮೇದಾರ್ ಅವರು ನಮ್ಮ ಕಸುಬು ಬಿದರಿನ ಕೆಲಸ ಹೀಗಾಗಿ ನಾವೇ ಸಿದ್ದಪಡಿಸಿದ ಬಿದರಿನ ವಸ್ತುಗಳೊಂದಿಗೆ ಹೊನ್ನಾಳಿ ಟಿ.ಬಿ ವೃತ್ತದಲ್ಲಿ ಭಾಗಿಯಾದೆವು ಎಂದರು. ಪ್ರಜಾಪ್ರಭುತ್ವ ಪ್ರಭುತ್ವ ದಿನಾಚರಣೆಯಲ್ಲಿ ನಮ್ಮ ಜನಾಂಗದ ಕುಲ ಕಸುಬನ್ನು ಇಲ್ಲಿ ಪ್ರಸ್ತುತ ಪಡಿಸಲಾಯಿತು. ಈ ಬೃಹತ್ ಕಾರ್ಯಕ್ರಮದಲ್ಲಿ ಮೇದಾರ್ ಜನಾಂಗ ಭಾಗಿಯಾಗಿದ್ದು ಸಂತಸ ತಂದಿದೆ ಎಂದರು. ಈ ವೇಳೆ ಆದಿವಾಸಿ ರಕ್ಷಣಾ ಪರಿಷತ್ ಪದಾಧಿಕಾರಿಗಳು,ಮೇದಾರ್ ಜನಾಂಗದವರು ಭಾಜಿಯಾಗಿದ್ದರು.