ಶಾಂತಿನಿಕೇತನ ಶಾಲೆಯಲ್ಲಿ ರಾಷ್ಟಿçÃಯ ಹಿಂದಿ ದಿನಾಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ.೧೫:ಸುಮಾರು ೪೨೫ ಮಿಲಿಯನ್ ಜನರು ಹಿಂದಿಯನ್ನು ಮೊದಲ ಭಾಷೆಯನ್ನಾಗಿ ಮಾತನಾಡುತ್ತಾರೆ. ೧೨೦ ಮಿಲಿಯನ್ ಜನರು ಹಿಂದಿಯನ್ನು ಎರಡನೇ ಭಾಷೆಯಾಗಿ ಮಾತನಾಡುತ್ತಾರೆ. ಹೀಗಾಗಿ ಈ ಹಿಂದಿ ಭಾಷೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಸೆಪ್ಟಂಬರ್ ೧೪ ರಂದು ರಾಷ್ಟಿçÃಯ ಹಿಂದಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ದೇವನಾಗರಿ ಲಿಪಿಯಲ್ಲಿ ಹಿಂದಿಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸಲಾಯಿತು ಎಂದು ಶಾಂತಿನಿಕೇತನ ಅಂತರಾಷ್ಟಿçÃಯ ಶಾಲೆಯ ಪ್ರಾಂಶುಪಾಲ ರಿಜೇಶ ಪಿ.ಎನ್. ತಿಳಿಸಿದರು.
ಶಾಂತಿನಿಕೇತನ ರಾಷ್ಟಿçÃಯ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹೆಚ್ಚೆಚ್ಚು ಜನರು ಹಿಂದಿ ಮಾತನಾಡಬೇಕು. ಹಿಂದಿ ಭಾಷೆಯನ್ನು ಎಲ್ಲರೂ ಪ್ರೀತಿಸಬೇಕು ಎಂದರು.
ಪ್ರೌಢ ಶಾಲಾ ಹಿಂದಿ ವಿಭಾಗದ ಮುಖ್ಯಸ್ಥ ಅಬುಬಕರ ಬಡೇಗರ ಅವÀರು ಮಾತನಾಡಿ, ಹಿಂದಿ ಭಾಷೆಗೆ ಪ್ರೇಮಚಂದರವರ ಕೊಡುಗೆ ಶ್ಲ್ಯಾಘನೀಯ ಎಂದು ನುಡಿದರು.
ಹಿಂದಿ ದಿನಾಚರಣೆ ನಿಮಿತ್ಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಿಂದಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಅಂತರಾಷ್ಟಿçÃಯ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.