ಸತ್ಯ ಶೋಧನೆ ಮಾಡುವುದೇ ವಿಜ್ಞಾನÀ: ಸಚಿವ ಈಶ್ವರ ಖಂಡ್ರೆ
ಬೀದರ:ಸೆ.೧೫:ಆಧುನಿಕ ಯುಗದಲ್ಲಿ ವಿಜ್ಞಾನ ಇಲ್ಲದಿದ್ದರೆ ಏನು ಇಲ್ಲ, ವಿಜ್ಞಾನ ಎಂದರೆ ಸತ್ಯದ ಶೋಧನೆ ಮಾಡುವದೆ ವಿಜ್ಞಾನ ಎಂದು ಕರೆಯಲಾಗುತದೆ ಎಂದು ಅರಣ್ಯ ,ಪರಿಸರ ಮತ್ತು ಜೀವಿಶಾಸ್ತç ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಹೊರವಲಯದಲಿರುವ ಸಂಸ್ಕಾರ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಜಿಲ್ಲೆಯ ಸಿಬಿಎಸಿ ಶಾಲೆಗಳ ಸಂಘ ಹಾಗೂ ಸಂಸ್ಕಾರ ಇಂಟರ್ ನ್ಯಾµನಲ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿರುವ ವಿಜ್ಞಾನ ವಸ್ತು ಪ್ರದರ್ಶನ ಮಹೊತ್ಸವ ಕಾಂiÀiðಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಗರಿಕತೆ ಬೆಳೆದಂತೆ ಮಾನವನಲಿ ವಿಜ್ಞಾನ ಎಲ್ಲ ಕ್ಷೇತ್ರದಲ್ಲಿಯು ಆವರಿಸಿಕೊಂಡಿದೆ ಎಂದರು.
ವಿಜ್ಞಾನ ಎಷ್ಟರ ಮಟ್ಟಿಗೆ ಬೆಳದಿದೆಯೆಂದರೆ ನೂಕ್ಲಿಯಾರ್ ಬಾಂಬ್ ಎಂಬ ಒಂದು ಅವಿಷ್ಕಾರ ಇಡಿ ಜಗತ್ತನ್ನೆ ಸರ್ವನಾಶ ಮಾಢುವ ಸಾಮರ್ಥವನ್ನು ಹೊಂದಿದೆ. ಇವತ್ತು ವಿಜ್ಞಾನ ಇಲ್ಲದೆ ಏನು ಇಲ್ಲ, ಮನುಷ್ಯನಲ್ಲಿರುವ ಶ್ರೇಷ್ಠವಾದ ಜ್ಞಾನವೆಂದರೆ ಅದು ವಿಜ್ಞಾನ. ಮನುಷ್ಯ ಅಗತ್ಯಕ್ಕೆ ತಕ್ಕಂತೆ ಅನ್ವೇಷಣೆ ಮಾಢುತ್ತಾ ಹೋಗುತಿವಿ ಅದು ನಮ್ಮ ಜೀವನ ಸುಗಮ ಗೊಳಿಸುತದೆ ಎಂಧು ನುಡಿದರು.
ಇವತ್ತು ನಾವು ಎಲ್ಲ ಕ್ಷೇತ್ರದಲ್ಲಿಯು ಮುಂಚಣೆಯಲಿದ್ದೆವೆ, ಕಡು ಬಡವ ಕೂಲಿಕಾರ್ಮಿಕ, ರೈತ ಸಹ ತಾನು ಇದ್ದ ಸ್ಥಳದಲ್ಲಿ ಇದ್ದುಕೊಂಡು ಜಗತ್ತಿನ ಯಾವದೆ ಮೂಲೆಯಲ್ಲಿ ಕುಳೀತಿರುವ ವ್ಯಕ್ತಿಗೆ ಕ್ಷಣಾರ್ಧದಲ್ಲಿ ಸಂದೇಶ ಕಳಹಿಸುವ ಮಟ್ಟಕ್ಕೆ ವಿಜ್ಞಾನ ಬೆಳೆದಿದ್ದೆ. ಅದರು ಸಹ ಇನ್ನು ಹೆಚ್ಚಿನ ಪ್ರಮಾಣದಲಿ ವಿಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆ ಅಗತ್ಯವಿದೆ ಎಂದರು.
ಇವತ್ತು ಇಡಿ ಜಗತ್ತೆ ನಮ್ಮ ಕಡೆ ನೋಡುತಿದೆ, ೨೧ ನೇ ಶತಮಾನ ಭಾರತಿಯ ಶತಮಾನ ಕಾರಣ ನಮ್ಮಲಿರುವ ಮಾನವ ಸಂಪನ್ಮೂಲ , ನಮ್ಮಲಿಯ ವಿಜ್ಞಾನಿಗಳು, ಇಂಜನಿಯರಗಳು ವಿದೇಶದಲ್ಲಿ ಹೋಗಿ ಸೇವೆ ಮಾಡುತಿದ್ದಾರೆ ಅವರನ್ನು ಮರಳಿ ಭಾರತಕ್ಕೆ ಕರೆಸಿಕೊಂಡರೆ ಆ ದೇಶಗಳ ಆಡಳಿತ ಬೂಡಮೇಲಾಗುತದೆ ಎಂದು ಹೇಳಿದರು.
ಮಕ್ಕಳನ್ನು ಉಜ್ವಲ ಭವಿಷ್ಯರೂಪಿಸಿಕೊಳ್ಳಲು ಭದ್ರಬುನಾದಿಯಾದ ಪ್ರಾಥಮಿ ಹಂತದಲ್ಲಿಯ ಶಿಕ್ಷಣ,ಇಲ್ಲಿ ಮಕ್ಕಳಿಗೆ ಅಗತ್ಯವಾದ ಜ್ಞಾನ ನೀಡಬೇಕಾದ ಜವಾಬ್ದಾರಿ ಶಿಕ್ಷಕರ ಹಾಗೂ ಸಂಸ್ಥೇಗಳ ಮೇಲಿದೆ ಎಂದ ಅವರು ಶಿಕ್ಷಕರು ತಮ್ಮ ಮಕ್ಕಳಂತೆ ಕಾಳಜಿವಹಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜತೆಯಲಿ ಸಾಮಾನ್ಯ ಜ್ಞಾವನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಮಕ್ಕಳು ಯಾವ ಕ್ಷೇತ್ರದಲ್ಲಿ ಯಾವ ವಿಷಯದಲ್ಲಿ ಆಯ್ಕೆಗೆ ಆಸಕ್ತಿಹೊಂದಿರುತಾರೆ ಅವರಿಗೆ ಸ್ವಾತಂತ್ರ ನೀಡಬೇಕು ಇಲ್ಲಿ ಪಾಲಕರು ಒತ್ತಡ ಹೇರಬಾರದು ಎಂದು ತಿಳಿಸಿದರು. ಮಕ್ಕಳು ಸಹ ತಾವು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ವಿಷಯದಲಿ ಗುರಿಯಿಟ್ಟುಕೊಂಡು ಕಠಿಣ ಪರಿಶ್ರಮ, ಧೃಡವಾಧ ಆತ್ಮವಿಶ್ವಾಸದಿಂದ ಮುಂದೆ ಸಾಗಿದ್ದಾಗ ಮಾತ್ರ ಅಂದುಕೊAಡದನ್ನು ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆಯಿಲ್ಲ ಆದರೆ ಅವರಿಗೆ ಪೂರಕವಾದ ವಾತವರಣ ಕಲ್ಪಿಸಿ ಅಗತ್ಯವಾದ ಸೌಲತ್ತು, ಹಾಗೂ ಪ್ರೋತ್ಸಾಹ ಅಗತ್ಯವಿದೆ ಎಂದ ಅವರು ಕಲ್ಯಾಣ ಕರ್ನಾಟಕ ಅಭವ್ರದ್ದಿ ಮಡಳಿಯಿಂದ ಬೀದರ್ ಜಿಲೆಗೆ ಶಿಕ್ಷಣದ ಗುಣಮಟ್ಟ ಸುಧಾರಿಸಭೇಕು ಎನ್ನುವ ಉದ್ದೇಶಧಿಂದ ಈ ವರ್ಷ ೧೨೫ ಕೋಟಿ ರೂ ವಿಶೇಷವಾಗಿ ಅನುದಾನ ಮಂಜುರಿ ಮಾಡಿ ಶಿಕ್ಷಣ ಸಂಸ್ಥೇಗಳ ಮೂಲಸೌಕರ್ಯ ಕಲ್ಪಿಸಲಾಗುತಿದೆ ಎಂದು ಸಚಿವರು ತಿಳಿಸಿದರು.
ಇವತ್ತು ಜಗತ್ತಿನಲ್ಲಿ ಹವಾಮಾನದಲ್ಲಿಯ ಆಗುತ್ತಿರುವ ಹೇರಾಪೇರಿಯಿಂದ ಪ್ರಕೃತಿಯಲ್ಲಿ ಅನೇಕ ರೀತಿಯ ಅವWಡಗಳು ಸಂಭವಿಸುತಿವೆ, ಇದಕ್ಕಾಗಿ ನಾವು ಪ್ರಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆ, ಹೀಗಾಗಿ ನಾವು ಹೆಚ್ಚಿನ ಪ್ರಮಾಣದಲ್ಲಿ ಗಿಡ ಮರಗಳನ್ನು ನಡೆಸಬೇಕಾಗಿದೆ, ಬರುವ ವರ್ಷದಲ್ಲಿ ಜಿಲ್ಲೆಯಲ್ಲಿ ೨೫ ಲಕ್ಷ ಸಸಿಗಳ ನಡೆಸುವ ಗುರಿಹೊಂದಲಾಗಿದ್ದು ಅದಕ್ಕೆ ತಾವೆಲ್ಲರು ಕೈಜೊಡಿಸಬೇಕೆಂದು ವಿದ್ಯಾರ್ಥಿ, ಹಾಗೂ ಪಾಲಕರಲ್ಲಿ ಮತ್ತು ಶಿಕ್ಷಕರಲ್ಲಿ ಮನವಿ ಮಾಡಿದರು.
ಸಿಬಿಎಸ್ಸಿ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷರು ಆದ ಸಂಸ್ಕಾರ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಮಲ್ಲಿನಾಥ ಮಠಪತ್ತಿ ಸ್ವಾಗತಿಸಿದರು. . ಸುರಬಿ ಎನ್‌ಜಿಓ ಹಾಗೂ ಸಂಸ್ಕಾರ ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷರಾದ ಡಾ.ಅಮರ ಎರೋಳಕ ವಂದನಾರ್ಪಣೆ ಮಾಡಿದರು.
ವೇದಿಕೆ ಮೇಲೆ ಶ್ರೀಮತಿ ಗೀತಾ ಖಂಡ್ರೆ, ಸಂಸ್ಥೇಯ ನಿರ್ದೇಶಕರಾದ ಕು.ಕ್ಷಿತಿಜಾ ಎರೋಳಕರ್, ಪ್ರಕಾಶ ಟೊಣೆ,ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಡಾ;ರಘುನಾಥ ,ಅವಿನಾಶ ಎರೋಳಕರ ಇದ್ದರು.
ಇದೇ ವೇಳೆ ಜಿಲ್ಲೆಯ ಸುಮಾರು ೨೩ ಸಿಬಿಎಸ್ ಶಾಲೆಯಿಂದ ಮಕ್ಕಳಿಂದ ೧೬೦ ಕ್ಕೂ ಹೆಚ್ಚು ತಯಾರಿಸಿದ ವಿಜ್ಞಾನ ವಸ್ತುಗಳ ವಿಕ್ಷಿಸಿದ ಸಚಿವರು ಸಂತಸ ವ್ಯಕ್ತಪಡಿಸಿದರು.