ಈಶ್ವರಸಿಂಗ್ ಠಾಕೂರ್ ದಂಪತಿಗಳಿAದ ಸವಿತಾ ಸಮಾಜ ಭವನದ ಮೇಲ್ಛಾವಣಿ ಉದ್ಘಾಟನೆ
ಸಂಜೆವಾಣಿ ವಾರ್ತೆ
ಬೀದರ್:ಸೆ.೧೫: ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ಅವರು ನೀಡಿರುವ ದೇಣಿಗೆಯಲ್ಲಿ ನಿರ್ಮಿಸಲಾದ ಜಿಲ್ಲಾ ಸವಿತಾ (ನಾವ್ಹಿ) ಸಮಾಜ ಭವನದ ಮೇಲ್ಛಾವಣಿ ಉದ್ಘಾಟನೆಯನ್ನು ಈಶ್ವರಸಿಂಗ್ ಠಾಕೂರ ದಂಪತಿಗಳ ಅಮೃತ ಹಸ್ತದಿಂದಲೇ ಉದ್ಘಾಟನೆ ಮಾಡಲಾಗಿದೆ. ನಮ್ಮ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಉಮೇಶಕುಮಾರ ಗೊಂದೆಗಾAವಕರ್ ತಿಳಿಸಿದರು.
ಜಿಲ್ಲಾ ಸವಿತಾ ಸಮಾಜದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದ ಸಮೀಪದ ಜನವಾಡಾ ರಸ್ತೆಯಲ್ಲಿರುವ ಸವಿತಾ ಸಮಾಜ ಭವನದ ಮೇಲ್ಛಾವಣಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಒಂದು ಮನವಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಸಮಾಜದ ಕೆಲಸ ಕಾರ್ಯಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ಠಾಕೂರ ಅವರು ದೇಣಿಗೆ ನೀಡಿದ್ದಾರೆ. ಅವರಿಗೆ ನಮ್ಮ ಸಮಾಜದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಉದ್ಘಾಟನೆ ನೆರವೇರಿಸಿದ ಬಿಜೆಪಿ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ ಮಾತನಾಡಿ ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ತತ್ವ ನಮ್ಮದಾಗಬೇಕು. ಸವಿತಾ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಸವಿತಾ ಸಮಾಜ ಮೇಲ್ಛಾವಣಿಯು ಸವಿತಾ ಸಮಾಜದ ಸಂಘಟನೆಗೆ ಪೂರಕವಾಗಿ ಸದ್ಬಳಕೆಯಾಗಲಿ. ಸಂಘಟಿತ ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಸಮಾಜದ ಗುರುಗಳಾದ ಪೂಜ್ಯ ಶ್ರೀ ಸವಿತಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ವೇಳೆಗೆ ಭವನದ ಮೇಲ್ಛಾವಣಿ ಉದ್ಘಾಟನೆಗೂ ಮುನ್ನ ಹೋಮ-ಹವನ, ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಗಂಧರ್ವ ಸೇನಾ, ಸಮಾಜದ ಉಪಾಧ್ಯಕ್ಷ ನಾಗರಾಜ ಆರ್ಯ, ಸಂಜುಕುಮಾರ ಮೋರ್ಗಿಕರ್, ಪ್ರಧಾನ ಕಾರ್ಯದರ್ಶಿ ಅಂಬಾದಾಸ ಹೋಗಾರ್ಗಿ, ಸಹ ಕಾರ್ಯದರ್ಶಿ ಹರೀಶ್ ಚಲವಾ, ಕೋಶಾಧ್ಯಕ್ಷ ವಸಂತ ತಿರಮನದಾರ, ಕಾರ್ಯಕಾರಿಣಿ ಸದಸ್ಯರುಗಳಾದ ಗಣಪತಿ ಮೋರ್ಗಿಕರ್, ಅಶೋಕ ಕರಂಜಿ, ಮಧುಕರ ಚಿನಿಮಿಶ್ರೀ, ಪ್ರಕಾಶ ಭೋಪಾಳಗಾಡ, ಪ್ರಕಾಶ ಹೊಕ್ರಾಣಾ, ರಾಕೇಶ್ ಚೌದ್ರಿ, ಸಂಗಪ್ಪ ಗೊಂದೆಗಾAವಕರ್, ಶ್ರೀನಿವಾಸ ಮುಖೇಡಕರ್, ಶ್ರೀನಿವಾಸ ಚಿಲ್ಲರ್ಗಿಕರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ತಾಯಂದಿರು, ಯುವಕರು ಉಪಸ್ಥಿತರಿದ್ದರು.