ಅಂಗಕ್ಕಾಗಿ ಇಂದು ಲಿಂಗಕ್ಕಾಗಿ ನಾಳೆ ಅನ್ನುಬಾರದು
ಬಸವಕಲ್ಯಾಣ:ಸೆ.೧೫: ಅಂಗಕ್ಕಾಗಿ ಇಂದು ಲಿಂಗಕ್ಕಾಗಿ ನಾಳೆ ಅನ್ನಬಾರದು ಎಂದು ಪ್ರವಚನಕಾರ. ಅನುಭವ ಮಂಟಪದ ಸಂಚಾಲಕರಾದ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.
ಇಲ್ಲಿನ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಪರಮ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರಾವಣ ಮಾಸದ ನಿಮಿತ್ಯ ಅಮರ ಗಣಂಗಳ ಆತ್ಮ ಜೀವನ ಚರಿತ್ರೆ ಪ್ರವಚನ ಅನುಭವಮಂಟಪದಲ್ಲಿ ಮಾತನಾಡಿ ಶಿವಶರಣ ಹಾವಿನಾಳ ಕಲ್ಲೇಶ್ವರರ ವಚನ ಕುರಿತು ಮಾತನಾಡಿದ ಅವರು ಲಿಂಗ ದಾಸೋಹ ಕಾಯಕ ಮಾರ್ಗದಲ್ಲಿ ಸಾಗಿದವರು ಬಸವಾದಿ ಶಿವಶರಣರು. ಅದು ಭಕ್ತಿ ಮಾರ್ಗವಾಗಿತ್ತು. ಪುರಾತರ ವಚನ ಆಲಿಸಬೇಕು. ಆಲಿಸಿದರೆ ತನುಮನ ಕರಗಿಸಬೇಕು .ಅಹಂಕಾರ ಬಿಟ್ಟು ಕಿಂಕರ ರಾಗಬೇಕು ಎಂದರು. ಇದೆ ಸಂದರ್ಭದಲ್ಲಿ ಅಶೋಕ್ ರೆಡ್ಡಿ ನಿಂಗಾವರೆ. ಸೂರ್ಯಕಾಂತ್ ಪಾಟೀಲ್. ಅನಿಲ್ ಸೂಗಿ. ರಾಜು ಮೇತ್ರೆ. ಸೋಮನಾಥ್ ಇಂಡೆ. ಗೌರಮ್ಮ ಸೋನಾಳೆ. ನಿರ್ಮಲಾ ತಳಬೂಗೆ. ಭಾರತ ಬಾಯಿ ಸ್ವಾಮಿ. ಶಿವಲೀಲಾ ಬಿರಾಜದಾರ.ಲಕ್ಷಿ ಇಂಡೆ.ಇನ್ನಿತರರು ಉಪಸ್ಥಿತರಿದ್ದರು.