ಬಾಲಕಿಯರ ಕಬಡ್ಡಿ ಪಂದ್ಯಾವಳಿ : ತಾಲೂಕ ಮಟ್ಟಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೫: ತಿಕೋಟಾ ತಾಲೂಕಿನ ವಲಯ ಮಟ್ಟದ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಟಕ್ಕಳಕಿ ಕ್ಲಸ್ಟರ್‌ನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಜಾಧವನಗರ ಟಕ್ಕಳಕಿಯ, ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವರ ಈ ಸಾಧನೆಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಧುಕರ ಜಾಧವ, ಎಸ್.ಡಿ.ಎಮ್.ಸಿ ಅಧ್ಯಕ್ಷÀ ಜಾಲೀಂದ್ರ ಘಾಟಗೆ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಮ್.ಎಮ್. ಜೇವೂರ, ಶಾಲಾ ಮುಖ್ಯಗುರುಗಳಾದ ಬಿ.ಎಸ್. ಹಾಲಳ್ಳಿ, ಸಿಬ್ಬಂದಿಯವರಾದ ಡಿ.ಎನ್. ಘೋಣಸಗಿ, ಎಸ್.ಜಿ. ಬಗಲಿ, ಶಿಲ್ಪಾ ಹಂಜಿ, ವಿ.ಎಮ್. ಮುಳಗುಂದ ಶಾಲಾ ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ.