ಡಾ. ಕೈಲಾಸನಾಥ ಶ್ರೀಗಳ ಆಧ್ಯಾತ್ಮಿಕ ಸಮಾಜ ಸೇವೆ ಗಿನ್ನಿಸ್ ದಾಖಲೆ
ಕೊಲ್ಹಾರ:ಸೆ.೧೫:ಸಮಾಜವೆ ನನ್ನ ಉಸಿರು, ಧರ್ಮವೆ ದಾರಿ ದೀಪವಾಗಲೆಂದು ನಿಸ್ವಾರ್ಥ ಸಮಾಜ ಸೇವೆ ಸಲ್ಲಿಸುತ್ತಿರುವ ಪೂಜ್ಯ ಶ್ರೀ ಘ ಮ ಪೂ ಧರ್ಮರತ್ನ ಡಾ ಕೈಲಾಸನಾಥ ಮಹಾ ಸ್ವಾಮಿಗಳು ಶೀಲವಂತ ಹಿರೇಮಠ ಪೂಜ್ಯರು ಇತ್ತೀಚೆಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟಣಾ ಸಮಾರಂಭದಲ್ಲಿ ಭಾಗಿಯಾಗಿದ್ದು ಕೋಲ್ಹಾರ ಪಟ್ಟಣದ ಸೌಭಾಗ್ಯ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಂತರ ಸಮಾವೇಶದಲ್ಲಿ ಸಂಪೂರ್ಣ ಶರಣರ ಚರಿತ್ರೆಯನ್ನೊಳಗೊಂಡ ಶ್ರೀ ಜಗಜ್ಯೋತಿ ಬಸವ ಪುರಾಣ ೪೮ ನಿಮಿಷದಲ್ಲಿ ಪಾರಾಯಣ ಮಾಡಿದ್ದು ವಿಶ್ವ ದಾಖಲೆ, ವಿಶ್ವ ಶಾಂತಿ ನಾಡು ಸಮ್ರದ್ದಿಗಾಗಿ ಪ್ರತಿದಿನ ಒಂದು ಕೋಟಿ ಜಪಾರಾಧನೆ ಅನುಷ್ಠಾನ ೩೨ ದಿವಸ ಆಧ್ಯಾತ್ಮಿಕ ಸಾಧನೆ ಮಾಡಿದ್ದು ಗಿನ್ನಿಸ್ ದಾಖಲೆಯಾಯಿತು,ಪೂಜ್ಯರು ತಂದೆ ಶ್ರೀ ಮುರುಗಯ್ಯಸ್ವಾಮಿ, ತಾಯಿ ಮಾತೊಶ್ರೀ ಪಾರ್ವತಮ್ಮನವರ ಉದರದಲ್ಲಿ ಒಂಬತ್ತನೇ ಮಗನಾಗಿ ಜನಿಸಿದರು ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೋಲ್ಹಾರ ಪಟ್ಟಣದಲ್ಲಿ ಪಡೆದು ಪದವಿ ಶಿಕ್ಷಣ ಹುಬ್ಬಳ್ಳಿಯಲ್ಲಿ ಪೂರೈಸಿ, ಸಂಸ್ಕೃತದಲ್ಲಿ ಎಂ. ಎ ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪಾರಂಗತರಾಗಿ ದೆಹಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ, ಐದು ರಾಷ್ಟ್ರೀಯ ಪ್ರಶಸ್ತಿ, ಹದಿನೈದು ರಾಜ್ಯ ಪ್ರಶಸ್ತಿ, ಇಂಡಿಯನ್ ಆಯ್ಕಾನ್ ಆವಾರ್ಡ ಸಿಕ್ಕಿದೆ, ಶ್ರೀಗಳ ಗಣನೀಯ ಆಧ್ಯಾತ್ಮಿಕ ಸಾಮಾಜಿಕ ಸೇವೆಯನ್ನು ಪರಿಗಣಿಸಿ , ರಿಯಾಲಿಟಿ ಬುಕ್ ಆಫ್ ವರ್ಡರಿಕಾರ್ಡನಲ್ಲಿ ಗಿನ್ನಿಸ್ ದಾಖಲೆಯಗಿದ್ದು ಕೋಲ್ಹಾರ ಪಟ್ಟಣದ ಗುರು ಹಿರಿಯರ,ನನ್ನ ಬಂಧುಗಳ, ನನ್ನ ಹಿತೈಸಿಗಳ,ಸಹಪಾಟಿಗಳ, ಪ್ರಜ್ಞಾವಂತರ ಮಾರ್ಗದರ್ಶನವೇ ನನಗೆ ದಾರಿ ದೀಪ ವಾಗಿದೆ, ಎಂದು ಹರ್ಷವ್ಯಕ್ತಪಡಿಸಿದರು, ಕಾರ್ಯಕ್ರಮದಲ್ಲಿ ಡಾ ರುಭೇರಿ ಇಮ್ಮನ್ವಾಯಿಲ್,ಡಾ ಶ್ರೀನಿವಾಸ ಡೆಪ್ಯುಟಿ ಕಮಿಷನರ್, ಡಾ ಎ ಪಿ ಶ್ರೀ ನಾಥ,ಶ್ರೀ ಡಾ ಅನಂತಮೂರ್ತಿ ಕುಪ್ಪುಸ್ವಾಮಿ, ಡಾ ಸೆಲ್ವನ್ ಡೈರೆಕ್ಟ್ ರ, ಡಾ ಹರ್ಷವರ್ಧನ, ಡಾ ಶ್ರೀ ಮತಿ ವಂದನಾ ಡಿಸೋಜ, ಡಾ ಮಹೆಶಾನಂದಜಿ, ಡಾ ನಂಬಿ ರಾಜ್, ಡಾ ಶ್ರೀಮತಿ ವೇಧಾ ದಿಕ್ಷಿತ, ಸಹಿತ ಅನೇಕ ಗಣ್ಯರು ಉಪಸ್ತಿತರಾಗಿದ್ದರು,