ಸಿದ್ಧಾಂಥ ಶಿಖಾಮಣಿ ಅಭಿಯಾನ ಸಮಾರೋಪಸ್ವಾಗತ ಸಮಿತಿ ಪದಾಧಿಕಾರಿಗಳ ಆಯ್ಕೆ
ಬೀದರ್:ಸೆ.೧೫: ನಗರದ ಬೆಲ್ದಾಳೆ ಕನ್ವೆನ್ಷನ್ ಹಾಲನಲ್ಲಿ ಸೆ. ೨೨ ರಂದು ಹಮ್ಮಿಕೊಂಡ ಶ್ರಾವಣ ಶಿವ ದರ್ಶನ ಸಂಚಾರ, ಶ್ರೀ ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದ ಯಶಸ್ವಿಗೆ ಸ್ವಾಗತ ಸಮಿತಿ ರಚಿಸಲಾಗಿದೆ.
ನಗರದ ಪಾಪನಾಶ ದೇಗುಲದಲ್ಲಿ ನೌಬಾದನ ಜ್ಞಾನ ಶಿವಯೋಗಾಶ್ರಮದ ಪೀಠಾಧಿಪತಿ ಡಾ. ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಶಿವಶರಣಪ್ಪ ವಾಲಿ (ಗೌರವಾಧ್ಯಕ್ಷ), ಬಸವರಾಜ ಜಾಬಶೆಟ್ಟಿ (ಅಧ್ಯಕ್ಷ), ಶಿವಯ್ಯ ಸ್ವಾಮಿ (ಕಾರ್ಯಾಧ್ಯಕ್ಷ), ಸೋಮಶೇಖರ ಪಾಟೀಲ ಗಾದಗಿ, ಆರ್.ಜಿ. ಮಠಪತಿ (ಉಪಾಧ್ಯಕ್ಷ),
ಸಂತೋಷ ಪಾಟೀಲ ಅಯಾಸಪುರ (ಪ್ರಧಾನ ಕಾರ್ಯದರ್ಶಿ), ಬಾಪುರಾವ್ ದೇಶಮುಖ, ಶಿವಕುಮಾರ ಸ್ವಾಮಿ ಬಂಬಳಗಿ, ವರದಯ್ಯ ಸ್ವಾಮಿ, ಪ್ರಕಾಶ ಪಾಟೀಲ ಮಳಚಾಪುರ, ಶಿವಕುಮಾರ ಪಾಟೀಲ ತೇಗಂಪುರ (ಕಾರ್ಯದರ್ಶಿ), ಕಂಟೆಪ್ಪ ಭಂಗೂರೆ (ಕೋಶಾಧ್ಯಕ್ಷ), ಮಹಾಲಿಂಗ ಸ್ವಾಮಿ ಚಟ್ನಳ್ಳಿ (ವಕ್ತಾರ).
ಸಮಾಜದ ಅನೇಕ ಹಿರಿಯರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.