ಸಿಯುಕೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಚಟುವಟಿಕೆಗಳಿಗೆ ಚಾಲನೆ
ಕಲಬುರಗಿ:ಸೆ.14:”ಜನರ ಸಹಭಾಗಿತ್ವವು ‘ಸ್ವಚ್ಛತಾ ಹಿ ಸೇವಾ’ ದ ಮುಖ್ಯ ಅಂಶವಾಗಿದೆ, ಜನರ ಭಾಗವಹಿಸುವಿಕೆ ಇಲ್ಲದೆ ನಾವು ಯಾವುದೇ ಬದಲಾವಣೆಯನ್ನು ತರಲು ಸಾಧ್ಯವಿಲ್ಲ” ಎಂದು ಸಿಯುಕೆಯ ಸಾಮಾಜಿಕ ಮತ್ತು ನಡವಳಿಕೆ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಚನ್ನವೀರ್ ಆರ್ ಎಂ ಹೇಳಿದರು.
ಇಂದು ಅವರು ಸಿಯುಕೆಯಲ್ಲಿ ಸ್ವಚ್ಛತಾ ಹಿ ಸೇವಾ 2024 ಚಟುವಟಿಕೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದರು. ಈ ಕಾರ್ಯಕ್ರಮವು ಎರಡು ವಾರಗಳ ಕಾಲ ನಡೆಯುತ್ತದೆ ಮತ್ತು 2 ನೇ ಅಕ್ಟೋಬರ್ 2024 ರಂದು ಮಹಾತ್ಮ ಗಾಂಧಿ ಜಯಂತಿಯಂದು ಮುಕ್ತಾಯಗೊಳ್ಳುತ್ತದೆ.
ಮುಂದುವರೆದು ಮಾತನಾಡಿ “ಖಾದಿ ಅಳವಡಿಕೆ, ಸಾಮಾಜಿಕ ಸಾಮರಸ್ಯ, ಸ್ವಚ್ಛತೆ ಇತ್ಯಾದಿ ಸೇರಿದಂತೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಹಾತ್ಮ ಗಾಂಧಿ 18 ಅಂಶಗಳ ರಚನಾತ್ಮಕ ಕಾರ್ಯಸೂಚಿಯನ್ನು ನೀಡಿದರು.
ಅವರು ಜಗತ್ತಿನಲ್ಲಿ ನೀವು ಬದಲಾವಣೆಯನ್ನು ಕಾಣಲು ಬಯಸಿದರೆ ಮೊದಲು ನೀವು ಬದಲಾಗಿ ಎಂದು ಹೇಳಿದರು. ಹಾಗಾಗಿ ಬದಲಾವಣೆ ನನ್ನಿಂದಲೇ ಆರಂಭವಾಗಬೇಕು. ‘ಸ್ವಚ್ಛತಾ ಹಿ ಸೇವಾ’ ಸ್ವಯಂಪ್ರೇರಿತತೆಯನ್ನು ಸಾಧಿಸಲು ಬಹಳ ಮುಖ್ಯ. ಇದು ಗಾಂಧಿಯವರ ಧ್ಯೇಯವಾಗಿತ್ತು. ‘ಸ್ವಚ್ಚತೆ ಎಂಬುದು ದೈವಿಸ್ವರೂಪವಾದ್ದು’ ಎಂದು ಹೇಳಲಾಗುತ್ತದೆ, ಇದು ವ್ಯಕ್ತಿಯ ಜೀವನದಲ್ಲಿ ಶುಚಿತ್ವದ ಮಹತ್ವವನ್ನು ಸೂಚಿಸುತ್ತದೆ” ಎಂದು ಹೇಳಿದರು.
ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಿ ಬಳಸುವ ಅನುಭವವನ್ನು ಹಂಚಿಕೊಂಡ ಅವರು “ಸರಕಾರಗಳು ಪೆÇ್ರೀತ್ಸಾಹಧನ ನೀಡುತ್ತಿದ್ದರೂ ಶೌಚಾಲಯ ನಿರ್ಮಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ, ನಿರ್ಮಿಸಿದರೂ ಕೂಡ ಅವರು ಬಳಸುವುದಿಲ್ಲ.
ಇವು ಭಾರತವನ್ನು ಬಯಲು ಶೌಚ ಮುಕ್ತ ಮಾಡುವ ಸ್ವಚ್ಛ ಭಾರತ್ ಮಿಷನ್‍ನ ಪ್ರಮುಖ ಸವಾಲುಗಳಾಗಿವೆ. ಅದಕ್ಕಾಗಿ ನಾವು ಯೋಜಿತ ನಡವಳಿಕೆಯ ಬದಲಾವಣೆಯನ್ನು ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ಹಳ್ಳಿಗರಲ್ಲಿ ಹೆಚ್ಚು ಪ್ರಭಾವವಿರುವ ಧಾರ್ಮಿಕ ಮುಖಂಡರು ಹಾಗೂ ಮಕ್ಕಳನ್ನು ಬಳಸಿಕೊಂಡಿದ್ದೇವೆ.
ಆಳಂದ ತಾಲೂಕಿನಲ್ಲಿ ಶೌಚಾಲಯ ನಿರ್ಮಿಸಿ ಬಳಸಲು ಗ್ರಾಮಗಳ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದೇವೆ. ನಮ್ಮ ಸಮಾಜ ವಿಜ್ಞಾನ ವಿದ್ಯಾರ್ಥಿಗಳು ಅಸ್ತಿತ್ವದಲ್ಲಿರುವ ನಂಬಿಕೆಗಳನ್ನು ಬದಲಾಯಿಸಲು ಹಾಗು ಹೊಸ ನಂಬಿಕೆಗಳು ರೂಡಿಸಲು ಮತ್ತು ಸಾಮಾಜಿಕ ಅಡೆತಡೆಗಳನ್ನು ನಿವಾರಿಸಲು ಕೆಲಸ ಮಾಡಿದ್ದಾರೆ.
ಆದ್ದರಿಂದ ಹಳ್ಳಿಗರಲ್ಲಿ ಸ್ವಚ್ಛ ಭಾರತ್ ಮಿಷನ್‍ನ ಪ್ರಯೋಜನಗಳನ್ನು ಪ್ರತಿಪಾದಿಸಲು ಮತ್ತು ಭಾರತವನ್ನು ಸುರಕ್ಷಿತ ಮತ್ತು ನೈರ್ಮಲ್ಯಯುತ ಮಾಡಲು ನಾನು ನಿಮಗೆ ಸಲಹೆ ನೀಡುತ್ತೇನೆ” ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಬಸವರಾಜ ಕುಬಕಡ್ಡಿ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ದೇಶದ ಪ್ರಜೆಗಳಾದ ನಾವು ಭಾರತವನ್ನು ಸ್ವಚ್ಛ ಮತ್ತು ನೈರ್ಮಲ್ಯಯುತ ಮಾಡುವಲ್ಲಿ ಬಹಳ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದೇವೆ.
ನಾವು ಬದುಕುವ ಹಕ್ಕು ಇದ್ದು ಹಾಗೆ ಇತರರನ್ನು ಬದುಕಲು ಬಿಡುವ ಜವಾಬ್ದಾರಿ ಕೂಡ ಇದೆ. ನಾವು ನಮ್ಮ ಸುತ್ತಮುತ್ತಲಿನ ಪ್ರದೇಶ, ನಗರಗಳು ಮತ್ತು ಹಳ್ಳಿಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ನಾವು ಆರೋಗ್ಯ ಮತ್ತು ಸಂತೋಷದ ಜೀವನವನ್ನು ನಡೆಸಬಹುದು. ಕೊಳಕು ಮತ್ತು ಅನೈರ್ಮಲ್ಯದಿಂದ ನಾವು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ. ನಮ್ಮ ಮನೆಯಿಂದ ಕಸವನ್ನು ಹೊರಗೆ ಹಾಕುವಾಗ ನಾವು ಜಾಗರೂಕರಾಗಿರಬೇಕು. ಅದನ್ನು ಸರಿಯಾಗಿ ಬೇರ್ಪಡಿಸಬೇಕು ಮತ್ತು ಸರಿಯಾದ ಸ್ಥಳದಲ್ಲಿ ವಿಲೇವಾರಿ ಮಾಡಬೇಕು.
ನಾವು ಕೋವಿಡ್-19 ಮತ್ತು ಪರಿಸರ ಮಾಲಿನ್ಯದಿಂದ ಡೆಂಗ್ಯೂ ಮತ್ತು ಇತರ ಮಾರಣಾಂತಿಕ ಕಾಯಿಲೆಗಳಂತಹ ಅನೇಕ ರೋಗಗಳಿಗೆ ತುತ್ತಾಗಿದ್ದೇವೆ. ನಾವು ಇಂದು ಪ್ರತಿಜ್ಞೆ ಮಾಡಿದ್ದೇವೆ, ನಮ್ಮ ಹಾಸ್ಟೆಲ್‍ಗಳು, ಕ್ಯಾಂಪಸ್, ಮನೆ, ನಗರಗಳು, ಹಳ್ಳಿಗಳು, ಸಾರ್ವಜನಿಕ ಸ್ಥಳಗಳು ಮತ್ತು ಬೀದಿಗಳನ್ನು ಸ್ವಚ್ಛವಾಗಿಡೋಣ.
ಸ್ವಚ್ಛತೆ ಕಾಪಾಡಲು ಹಲವು ಕಾನೂನುಗಳು ಮತ್ತು ನಿಯಮಗಳಿವೆ, ಆದರೆ ನಮ್ಮ ದೇಶವನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ನಮಗೆ ಸಾಧ್ಯವಾಗುತ್ತಿಲ್ಲ. ಅದನ್ನು ಕಾನೂನು ಜವಾಬ್ದಾರಿಯಾಗಿ ತೆಗೆದುಕೊಳ್ಳುವ ಬದಲು ನಮ್ಮ ಸ್ವಯಂಪ್ರೇರಿತ ಕರ್ತವ್ಯವಾಗಿ ತೆಗೆದುಕೊಳ್ಳೋಣ. ಆದ್ದರಿಂದ ಈ ವರ್ಷದ ಧ್ಯೇಯ ವಾಖ್ಯ ʼಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾʼ ಆಗಿದೆ” ಎಂದು ಹೇಳಿದರು.
ಇದಕ್ಕೂ ಮುನ್ನ ಸ್ವಚ್ಛತಾ ಹಿ ಸೇವೆ-2024ರ ಸಿಯುಕೆ ನೋಡಲ್ ಅಧಿಕಾರಿ ಡಾ. ಗಣಪತಿ ಬಿ ಸಿನ್ನೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸ್ವಚ್ಛತಾ ಹಿ ಸೇವೆ-2024ರ ಅಡಿಯಲ್ಲಿ ಎರಡು ವಾರಗಳ ಕಾಲ ನಡೆಯುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಿಯುಕೆ ತನ್ನ ಕ್ಯಾಂಪಸ್, ಬಸ್ ನಿಲ್ದಾಣಗಳು, ಚರಂಡಿಗಳು, ಕಡಗಂಚಿ, ಸುಂಟನೂರಿನ ಸಾರ್ವಜನಿಕ ಸ್ಥಳಗಳನ್ನು ಎರಡೂ ಗ್ರಾಮ ಪಂಚಾಯತ್‍ಗಳ ಸಹಯೋಗದಲ್ಲಿ ಸ್ವಚ್ಛಗೊಳಿಸುತ್ತಿದೆ ಮತ್ತು ವಾಕಥಾನ್, ಮನೆ ಮನೆಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಕಲಬುರಗಿ ಕೋಟೆ ಮತ್ತು ಬೀದಿ ಆಹಾರ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನಾವು ಈ ವರ್ಷದ ಸ್ವಚ್ಛ ಭಾರತ್ ಮಿಷನ್ ವಿಷಯದ ಮೇಲೆ ಶಿಕ್ಷಣ, ಪ್ರಬಂಧ ಸ್ಪರ್ಧೆಗಳು, ಕವಿತೆ ಬರೆಯುವುದು, ಚಿತ್ರಕಲೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಸ್ವಚ್ಛತಾ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಸಹ ಆಯೋಜಿಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೆÇ್ರ.ಚನ್ನವೀರ ಆರ್ ಎಂ ಅವರು ಎಲ್ಲಾ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.
ಪೆÇ್ರ.ಎಂ.ಎಸ್.ಪಾಸೋಡಿ, ಪೆÇ್ರ.ಪವಿತ್ರಾ ಆಲೂರ್, ಡಾ.ಜೊಹೈರ್, ಡಾ.ದೀಪ್ತಿ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ.ಸೈಲಜ್ ಕೊನೆಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಎನ್ ಎಸ್ ಎಸ್ ಸಂಯೋಜಕ ಡಾ.ಶಿವಂ ಮಿಶ್ರಾ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡ ಗೀತೆ ಹಾಗೂ ರಾಷ್ಟ್ರಗೀತೆ ಹಾಡಿದರು.