ಹಿಂದಿ ಭಾರತೀಯರ ಹೃದಯ ಭಾಷೆ
ಕಲಬುರಗಿ:ಸೆ.14: ಹಿಂದಿ ಭಾಷೆಯು ಪ್ರತಿಯೊಬ್ಬರ ಭಾರತೀಯರ ಹೃದಯ ಭಾಷೆಯಾಗಿದೆ ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಪ್ರಪಂಚದ ಪ್ರಜಾಪ್ರಭುತ್ವದ ಸ್ಥಿತಿಯನ್ನು ಪರಿಶೀಲಿಸಲು ಅವಕಾಶವನ್ನು ಒದಗಿಸುತ್ತದೆ. ಪ್ರಜಾಪ್ರಭುತ್ವವು ಒಂದು ಗುರಿಯಂತೆಯೇ ಒಂದು ಪ್ರಕ್ರಿಯೆಯಾಗಿದೆ ಮತ್ತು ಅಂತರರಾಷ್ಟ್ರೀಯ ಸಮುದಾಯ, ರಾಷ್ಟ್ರೀಯ ಆಡಳಿತ ಮಂಡಳಿಗಳು, ನಾಗರಿಕ ಸಮಾಜ ಮತ್ತು ವ್ಯಕ್ತಿಗಳ ಸಂಪೂರ್ಣ ಭಾಗವಹಿಸುವಿಕೆ ಮತ್ತು ಬೆಂಬಲದೊಂದಿಗೆ ಮಾತ್ರ ಪ್ರಜಾಪ್ರಭುತ್ವದ ಆದರ್ಶವನ್ನು ಎಲ್ಲರೂ, ಎಲ್ಲೆಡೆ ಆನಂದಿಸಲು ವಾಸ್ತವಿಕಗೊಳಿಸುತ್ತದೆ ಎಂದರು. ಹಿಂದಿ ಒಂದು ಭಾಷೆ ಎನ್ನುವುದಕ್ಕಿಂತ ಭಾರತೀಯ ಸಾಂಸ್ಕøತಿಕ ಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವ ಸುಂದರವಾದ ಸರಳ ಭಾಷೆ. ಹಿಂದು ಭಾರತೀಯ ಜನಭಾಷೆ, ರಾಜಭಾಷೆ, ಸಂಪರ್ಕ ಭಾಷೆ ಆಗಿರುವುದಲ್ಲದೆ ಜನತೆಯ ಭಾವನೆಗಳನ್ನು ಬೆಸೆಯುವ ಕೋಮಲ ಭಾಷೆಯಾಗಿದೆ. ಅದೊಂದು ಮಧುರವಾದ ಭಾಷೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶರಣಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕರಾದ ಶ್ರೀಮತಿ ಮಂಗಲ ಕಪರೆ ಮಾತನಾಡಿ, ಹಿಂದಿ ಭಾμÉ ತುಂಬಾ ಶ್ರೀಮಂತವಾಗಿದೆ. ಇದರಲ್ಲಿ ಎಲ್ಲವೂ ಅಡಗಿದೆ ಪ್ರತಿಯೊಬ್ಬರು ಈ ಭಾμÉಯನ್ನು ಕಲಿಯಬೇಕು, ಓದಬೇಕು, ಹೆಚ್ಚು ಬಳಸಬೇಕು. ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದ್ದಾರೆ. ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಜಾರಿಗೆ ತಂದಿದ್ದು. ಹಿಂದಿ ಭಾμÉ ಮತ್ತು ಸಂಸ್ಕøತಿಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಹಿಂದಿ ದಿವಸ್ ಆಚರಣೆ ಜೊತೆಗೆ ಹಿಂದಿ ಸಾಹಿತ್ಯವನ್ನೂ ಸಂದರ್ಭದಲ್ಲಿ ಪ್ರಚುರಪಡಿಸಲಾಗುತ್ತದೆ. ದೇಶಾಧ್ಯಂತ ಸಾಂಸ್ಕೃತಿ ಉತ್ಸವಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಹಿಂದಿ ಭಾಷೆಯಲ್ಲಿ ಸೌಂದರ್ಯ ಇದೆ, ಅದು ನಮ್ಮೆಲ್ಲರ ಭಾಷೆಯಾಗಿದೆ. ಹಿಂದಿ ಭಾರತದಾದ್ಯಂತ ಮಾತನಾಡುವ ಜನಪ್ರಿಯ ಅತ್ಯಂತ ಜನಪ್ರಿಯ ಭಾಷೆ. ಎಲ್ಲ ಭಾಷೆಗಳು ಅಷ್ಟೇ ಮಹತ್ವದಾಗಿದೆ ಆದರೂ ಹಿಂದಿ ಭಾಷೆ ಎಲ್ಲರನ್ನೂ ಆತ್ಮೀಯವಾಗಿಸುತ್ತದೆ ಎಂದರು. ವಿಶ್ವದಲ್ಲಿ ಅತಿ ಹೆಚ್ಚು ಮಾತನಾಡುವ ಭಾμÉಯಲ್ಲಿ ಹಿಂದಿ ನಾಲ್ಕನೇ ಭಾμÉಯಾಗಿದೆ. ವಿಶ್ವದಲ್ಲಿ ಸುಮಾರು 25-30 ಕೋಟಿಗೂ ಹೆಚ್ಚು ಜನರು ಹಿಂದಿ ಮಾತನಾಡುತ್ತಾರೆ. ಇದರಿಂದಲೇ ಹಿಂದಿ ಭಾμÉಯನ್ನು ರಾಷ್ಟ್ರದ ಎಲ್ಲಾ ಜನರು ಹಿಂದಿ ಮಾತನಾಡಬೇಕು, ಆ ಮೂಲಕ ದೇಶದ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಬೇಕು ಎಂದು ಹೇಳಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಕಲ್ಪನಾ ಡಿ.ಎಂ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕು.ಜವೇರಿಯಾ ಅಂಜುಮ್ ನಿರೂಪಿಸಿದರೆ ಕು.ಸಾಧನ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.