09ನೇ ಹಾಗೂ 11ನೇ ದಿವಸದ ಗಣೇಶ ವಿಸರ್ಜನೆ:ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ಕಲಬುರಗಿ:ಸೆ.14:ಪ್ರಸಕ್ತ 2024ನೇ ಸಾಲಿನ 9ನೇ ಹಾಗೂ 11ನೇ ದಿವಸದ ಗಣೇಶ ವಿಸರ್ಜನೆ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಇದೇ ಸೆಪ್ಟೆಂಬರ್ 15ರ ಬೆಳಗಿನ 6 ಗಂಟೆಯಿಂದ ಸೆಪ್ಟೆಂಬರ್ 16ರ ಬೆಳಗಿನ 6 ಗಂಟೆಯವರೆಗೆ ಹಾಗೂ ಸೆಪ್ಟೆಂಬರ್ 17ರ ಬೆಳಗಿನ 6 ಗಂಟೆಯಿಂದ ಸೆಪ್ಟೆಂಬರ್ 18 ರ ಬೆಳಗಿನ 6 ಗಂಟೆಯವರೆಗೆ ಎಲ್ಲಾ ತರಹದ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯಪಾನ, ಸರಾಯಿ, ಶೆಂಧಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಮದ್ಯಮಾನವನ್ನು ನಿಷೇಧಿಸಿ, ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶ ಹೊರಡಿಸಿದ್ದಾರೆ.
ಈ ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.