ಜೀವನ ಪ್ರಕಾಶ ಶಾಲೆಯ ವಿದ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆ
ಕಲಬುರಗಿ,ಸೆ.14-ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಜೀವನ ಪ್ರಕಾಶ ಶಾಲೆಯ ಮಕ್ಕಳು ಹ್ಯಾಂಡ್‍ಬಾಲ್‍ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಂಬಿಕಾ, ಚೈತ್ರಾ, ಪೂಜಾ, ಸಿದ್ದಮ್ಮ, ನಮ್ರತಾ, ಪ್ರೀತಿ ಆರ್., ಪ್ರೀತಿ, ಶೀಲು, ಖುಷಿ, ವಿದ್ಯಾಶ್ರೀ, ಗಾಯತ್ರಿ, ಕೀರ್ತಿ, ಶಿವ, ಬಸವರಾಜ ವಿಭಾಗಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.
ಜಿಲ್ಲಾ ಮಟ್ಟಕ್ಕೆ ಆಯ್ಕೆ: ತಾಲ್ಲೂಕ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ಪ್ರೀತಿ, ಶೀಲು ಪ್ರಥಮ ಸ್ಥಾನ, 100 ಮೀಟರ್ ಓಟದಲ್ಲಿ ಸೃಷ್ಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತಾಧಿಕಾರಿ ಸುಶೀಲಾ ಪಿ, ಪ್ರಶಾಂತ ಪಿ, ಗೋಲ್ಡಾ ಪಿ, ಮುಖ್ಯಗುರು ಅಮರೇಶ್ವರ ಸೀಳಿ, ದೈಹಿಕ ಶಿಕ್ಷಕ ಪುನೀತ ಸಿರೂರ ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.