ಇಂಜಿನಿಯರ್ಸ್ ಡೇ,ಸನ್ಮಾನ ಸಮಾರಂಭ ನಾಳೆ
ಕಲಬುರಗಿ,ಸೆ 14: ಭಾರತ ಕಂಡ ಶೇಷ್ಠ ಇಂಜಿನಿಯರ್ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು 57 ನೆಯ ಇಂಜಿನಿಯರ್ಸ್ ಡೇ ಎಂದು ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕಲಬುರಗಿ ಸ್ಥಾನಿಕ ಕೇಂದ್ರದಿಂದ ನಗರದ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಾಳೆ ( ಸೆ .15) ಸಂಜೆ 6 ಘಂಟೆಗೆ ಆಚರಿಸಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಆಗಮಿಸಲಿದ್ದಾರೆ. ಬೆಂಗಳೂರಿನ ಸಿವಿಲ್ ಇಂಜಿನಿಯರ್ ಮತ್ತು ಇತಿಹಾಸಕಾರ ಧರ್ಮೇಂದ್ರ ಅರೇನಹಳ್ಳಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಂಗಳೂರಿನ ಎರಿಕ್ಸನ್ ಕಂಪನಿ ಇಂಜಿನಿಯರ್ ಸುನಿಲ್ ಕುಮಾರ್ ಕುಲಕರ್ಣಿ ದಿಕ್ಸೂಚಿ ಭಾಷಣವನ್ನು ನೀಡಲಿದ್ದಾರೆ .ಸಭೆಯ ಅಧ್ಯಕ್ಷತೆಯನ್ನು ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಅಧ್ಯಕ್ಷ ಡಾ. ಶ್ರೀಧರ್ ಪಾಂಡೆ ವಹಿಸಲಿದ್ದಾರೆ .ಇದೇ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಎಮಿನೆಂಟ್ ಇಂಜಿನಿಯರುಗಳಾದ ಇಂಜಿನಿಯರ್ ಗಿರಿಧರ್ ಕುಲ್ಕರ್ಣಿ ಚೀಫ್ ಇಂಜಿನಿಯರ್ ಕೆಪಿಟಿಸಿಎಲ್, ನಾಗೇಂದ್ರಪ್ಪ ಬಿರಾದಾರ್ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಇರಿಗೇಶನ್,
ಡಾ.ಬಸವರಾಜ ಗಾದಗೆ ರೀಜನಲ್ ಡೈರೆಕ್ಟರ್ ವಿಟಿಯು ಕಲಬುರ್ಗಿ, ಇಂಜಿನಿಯರ್ ಸಂಪತ್ ಗಿಲಡಾ ಖ್ಯಾತ ಉದ್ಯಮಿ,ಇಂಜಿನಿಯರ್ ಶ್ರೀಯಾಂಕಾ ಧನಶ್ರೀ ಕೆ ಎಂ ಎಸ್, ತಹಶೀಲ್ದಾರ್ 6) ಇಂಜಿನಿಯರ್ ಅನಿಲ್ ಕುಮಾರ್ ಕಾಡಾದಿ ಖ್ಯಾತ ಉದ್ಯಮಿ, 7) ಡಾ. ನಾಗೇಂದ್ರ ಹೆಚ್ ಪ್ರಾಧ್ಯಾಪಕರು ಪಿ ಡಿ ಎ ಎಂಜಿನಿಯರಿಂಗ್ ಕಾಲೇಜ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ನಂತರ ಡಾ ಪ್ರಶಾಂತ್ ಕಾಂಬಳೆ, ಇಂಜಿನಿಯರ್ ಚಂದ್ರಶೇಖರ ಸುಲೆಪೇಟಕರ್ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಪೆÇ್ರ. ಸೀತಾರಾಮ ರೆಡ್ಡಿ ಮುನ್ನೂರು ಅವರು ತಿಳಿಸಿದ್ದಾರೆ.