ನರಿಬೋಳ ಚಾಮನೂರ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ:ಪಾದಯಾತ್ರೆ 16 ರಂದು
ಕಲಬುರಗಿ,ಸೆ 14: ಜೇವರಗಿ ತಾಲೂಕ ನರಿಬೋಳ ಚಿತಾಪೂರ ತಾಲೂಕಾ ಚಾಮನೂರ ಗ್ರಾಮಗಳ ನಡುವೆ ಹರಿಯುವ ಭೀಮಾನದಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಸೆ 16 ರಂದು ನರಿಬೋಳದಿಂದ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಎಂ.ಎಸ್ ಪಾಟೀಲ ನರಿಬೋಳ, ಶರಣಗೌಡ ಮಾಲಿ ಪಾಟೀಲ ಚಾಮನೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನರಿಬೋಳದಿಂದ ಬೆಳಿಗ್ಗೆ 7 ಗಂಟೆಗೆ ಸೇತುವೆ ಸ್ಥಳದಿಂದ ಪಾದಯಾತ್ರೆಗೆ ಹಲವಾರು ಮಠಾಧೀಶರುಗಳು ಚಾಲನೆ ನೀಡಲಿದ್ದು ಎನಗುಂಟಿ ಮದರಿ ಕಟ್ಟಿಸಂಗಾವಿ ಮಾರ್ಗವಾಗಿ ಕಲಬುರಗಿ ಆಗಮಿಸಿ ಮುಖ್ಯಮಂತ್ರಿಗಳಿ ಮುತ್ತಿಗೆ ಹಾಕಲಾಗುವುದು ಎಂದರು.
ಈ ಸೇತುವೆಗೆ 2017 ಡಿಸೆಂಬರನಲ್ಲಿ ಅಡಿಗಲ್ಲು ಹಾಕಿ ಕೆಲಸ ಪ್ರಾರಂಭವಾಯಿತು. ಪ್ರಾರಂಭವಾದ ಒಂದೇ ವರ್ಷದಲ್ಲಿ ಶೇ 75 ರಷ್ಟು ಕಾಮಗಾಗಿ ಪೂರ್ಣಗೊಂಡಿತು. ನಂತರ ಏಕಾಏಕಿ ಕಾಮಗಾರಿ ಸ್ಥಗಿತಗೊಂಡು 6 ವರ್ಷವಾದರೂ ಕೆಲಸ ಪ್ರಾರಂಭವಾಗುವ ಲಕ್ಷಣಗಳಿಲ್ಲ.ಕೇವಲ ಮುರುಮ್ ಕಾಲಂಗಳು ಹಾಕಿದರೆ ಕಾಮಗಾರಿ ಸಂಪೂರ್ಣವಾಗುತ್ತದೆ. ಇದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನಕ್ಕೆ ತುಂಬಾ ಅನುಕೂಲವಾಗುತ್ತದೆ ಹಣ ಮತ್ತು ಸಮಯ ಉಳಿತಾಯವಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶರಣಗೌಡ ಪೆÇೀಲಿಸ್ ಪಾಟೀಲ ನರಿಬೋಳ ರಾಘವೇಂದ್ರ ಕುಲಕರ್ಣಿ ನರಿಬೋಳ, ಗುರುರಾಜ ಟಣಕೆದಾರ ,ಭೀಮು ಕಾಖಂಟಿಗಿ, ಸೋಮಶೇಖರಯ್ಯಾ ಹಿರೇಮಠ ಇದ್ದರು