ಸೆ.15ಕ್ಕೆ ಬೃಹತ್ ಮಾನವ ಸರಪಳಿ ರಚನೆಗೆ ಸಿದ್ಧತೆ
ವಾಡಿ:ಸೆ.14: ಸರ್ಕಾರದ ಆದೇಶದಂತೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಪಟ್ಟಣದ ನಾಗರಿಕರು ಭಾಗವಹಿಸಿ ಪ್ರಜಾಪ್ರಭುತ್ವದ ಗಟ್ಟಿ ಧ್ವನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುವಂತೆ ಮಾಡಲು ಕೈಜೋಡೆಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದಿನ್ ಸಾಬ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು, ವಿಶ್ವ ಪ್ರಜಾಪ್ರಭುತ್ವದ ದಿನದ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಬೃಹತ್ ಮಾನವ ಸರಪಳಿ ರಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಚಿತ್ತಾಪುರ ತಾಲ್ಲೂಕಿನ ಪುರಸಭೆ ವಾಡಿ ವ್ಯಾಪ್ತಿಯಲ್ಲಿ ಬರಲಾಗುತ್ತಿದ್ದ, ಬಳಿರಾಮಚೌಕ್ ಮೂಲಕ ಹಲಕರ್ಟಿ ಮಾರ್ಗವಾಗಿ ಸಾಗಲಿದ್ದ ಸೆ.15 ರಂದು ರವಿವಾರ ಬೆಳಗ್ಗೆ 8ಗಂಟೆಯಿಂದ 9.30 ರವರೆಗೆ ಮಾನವ ಸರಪಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಾಡಿ ಪಟ್ಟಣದ ಗಣ್ಯರು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸ್ವ-ಸಹಾಯ ಗುಂಪುಗಳು, ಅರೆ ಸರಕಾರಿ ನೌಕರರು, ಪೌರಕಾರ್ಮಿಕರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು. ಶಾಲಾ ಕಾಲೇಜು ಮಕ್ಕಳು ಮತ್ತು ಶಿಕ್ಷಕರು ಎನ್.ಜಿ.ಓ ಸದಸ್ಯರು, ಯುವಜನರು ಹಾಗೂ ಪಟ್ಟಣದ ಎಲ್ಲಾ ಸಾರ್ವಜನಿಕರು ವಾಡಿ ಪಟ್ಟಣದ ನವೀನ ಪೆಟ್ರೋಲ್ ಬಂಕ್ ನಿಂದ ಬಲರಾಮ ಚೌಕ ವರೆಗೆ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.