ರಸ್ತೆ ಬದಿ ಮುಳ್ಳು ಕಂಟಿ, ಸಂಚಾರ ಬಲು ಗೋಳು
ಮಹಾಂತೇಶ ಹಾದಿಮನಿ.
ದೇವರಹಿಪ್ಪರಗಿ :ಸೆ.14: ಭೈರವಾಡಗಿ ಯಿಂದ ಯಾಳವಾರ ಹೋಗುವ ಮಾರ್ಗ ಮದ್ಯ ರಸ್ತೆಯ ಎರಡು ಬದಿಗಳಲ್ಲಿ ಜಾಲಿಮುಳ್ಳಿನ ಕಂಟಿಗಳು ಅಪಘಾತಕ್ಕೆ ಆಹ್ವಾನ ನೀಡುವಂತೆ ಬೆಳೆದು ನಿಂತಿವೆ.
ಸಾತಿಹಾಳ ಮಾರ್ಗವಾಗಿ ಭೈರವಾಡಗಿ,ನಾಗರಾಳ ಡೋಣ ಕಡಕೋಳ,ಯಾಳವಾರ ಕುದರಿಸಾಲವಡಗಿ ಹೂ ಹಿಪ್ಪರಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದು ಆಗಿದ್ದು.
ರಸ್ತೆ ಬದಿಯ ಎರಡು ಕಡೆಗಳಲ್ಲಿ ಜಾಲಿ ಮುಳ್ಳಿನ ಟೊಂಗೆಗಳು ರಸ್ತೆಗೆ ಚಾಚಿಕೊಂಡಿವೆ ಇದರಿಂದ ವಾಹನಗಳಿಗೆ, ರೈತರಿಗೆ ಕುಲಿಕಾರ್ಮಿಕರು ಇತರೆ ಸಾರ್ವಜನಿಕರು ಈ ರಸ್ತೆಯ ಮೂಲಕ ಸಂಚಾರಿಸಲು ತೊಂದರೆಯಾಗುತ್ತಿದೆ.
ಭೈರವಾಡಗಿ ಯಿಂದ ಯಾಳವಾರ ಹೋಗುವ ಕಿರಿದಾದ ರಸ್ತೆಯಲ್ಲಿ ಹತ್ತಾರುವ ತಿರುವುಗಳಿವೆ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನೀತಿರುವುದರಿಂದ ತಿರುವುಗಳಲ್ಲಿ ಎದುರಿಗೆ ಬರುವ ವಾಹನಗಳು ಕಾಣಿಸದಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಕೆಎ???ರ್ ಟಿಸಿ ಬಸ್ ಶಾಲೆ ವಾಹನಗಳು, ಟಂ ಟಂ, ಗೂಡ್ಸು ವಾಹನಗಳು ಓಡಾಡುತ್ತಿವೆ.ಎದುರಿಗೆ ಬರುವ ವಾಹನಗಳಿಗೆ ಬೈಕ್ ಸವಾರರು ಬೈಪಾಸ್ ಆಗಬೇಕಾದರೆ ಜಾಲಿ ಮುಳ್ಳುಗಳಿಂದ ಮೈಕೈಗೆ ಚುಚ್ಚಿಕೊಂಡು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದೆ ರಸ್ತೆಯ ಮಾರ್ಗ ಮದ್ಯ ಭೈರವಾಡಗಿ ಗ್ರಾಮದ ಗ್ರಾಮ ದೇವತೆಯಾದ ಲಕ್ಕಮ್ಮ ದೇವಿ ದೇವಸ್ಥಾನ ಊರಿನಿಂದ ಅರ್ಧ ಕಿಲೋಮೀಟರ್ ದೂರು ವಿರುತ್ತದೆ. ಮೈತುಂಬಾ ಮುಳ್ಳು ಕಂಟಿ ಚುಚ್ಚು ಕೊಂಡು ಭಕ್ತರು ದೇವಿ ದರ್ಶನ ಪಡೆಯುವಂತಾಗಿದೆ.ಎಂದು ಗ್ರಾಮಸ್ಥರು ದೂರಿದ್ದಾರೆ.
ಚುನಾವಣೆ ವೇಳೆ ಮಾತ್ರ ರಾಜಕೀಯ ನಾಯಕರು ಬಾರಿ ಅಭಿವೃದ್ಧಿ ಮಾತುಗಳು ಬರುತ್ತವೆ ಚುನಾವಣಾ ನಂತರ ರಾಜಕೀಯ ನಾಯಕರಿಗೆ ಗ್ರಾಮ, ರಸ್ತೆ,ಅಭಿವೃದ್ಧಿ
ನೆನಪಿರೋದಿಲ್ಲವೆಂದು ಈ ರಸ್ತೆಗೆ ಸಂಚಾರ ಮಾಡುತ್ತಿರುವ ಸಾರ್ವಜನಿಕರು, ಗ್ರಾಮಸ್ಥರು ರಾಜಕೀಯ ಮುಖಂಡರ ಮೇಲೆ ಕಿಡಿ ಕಾರಿದ್ದಾರೆ.
ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ರಸ್ತೆ ಬದಿ ಬೆಳದ ಅನಗತ್ಯ ಜಾಲಿ ಮುಳ್ಳು ಕಂಟಿಗಳನ್ನು ತೆರವುಗೋಳಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈ ರಸ್ತೆಗೆ ಅಡ್ಡಾಡುತ್ತಿರುವ ಸಾರ್ವಜನಿಕರು ಒತ್ತಾಯಿಸಿದ್ದಾರೆ.