ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕೂಟದಲ್ಲಿ ಮಲ್ಲಿಕಾರ್ಜುನ ಶಾಲಾ ಮಕ್ಕಳ ಸಾಧನೆ
ವಿಜಯಪುರ,ಸೆ.14: ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ಇತ್ತೀಚೆಗೆ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಶಿವಣಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ವಿಶೇಷ ಸಾಧನೆಗೈದಿದ್ದಾರೆ.
ಸಿದ್ದಾರ್ಥ ತೊರವಿ, ಸೃಷ್ಟಿ ಧನವಡೆ, ಪೂಜಪ್ಪ ಪೂಜಾರಿ, ರಾಜೇಶ್ವರಿ ಗಾಣಿಗೇರ, ಮಲ್ಲಿಕಾರ್ಜುನ ಪೂಜಾರಿ, ಶ್ರೇಯಾ ಹುಣಶ್ಯಾಳ, ಪಲ್ಲವಿ ಠಾಕೂರ, ಲಕ್ಷ್ಮೀ ಕೆರೂರ, ಶ್ರೀಕಾಂತ ಕೊರಕಿ, ಸಹನಾ ಹುಣಶ್ಯಾಳ ಅವರು ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎತ್ತರ ಜಿಗಿತದಲ್ಲಿ ಮಹೇಶ ಗಿಡಗಂಟಿ ಪ್ರಥಮ ಸ್ಥಾನ ಪಡೆದು, ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ಶಾಲಾ ಮುಖ್ಯ ಶಿಕ್ಷಕ ಎಸ್ ಎನ್ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಹಾಗೂ ಶಿಕ್ಷಕರಾದ ಎಂ.ಎಸ್. ಪಾಪನಾಳಮಠ, ರಾಘು ಮೊಗಳ, ಜಯಶ್ರೀ ಬಂಗಾರಿ, ಮಧುಮತಿ ನಿಕ್ಕಂ, ಸರೋಜನಿ ಕಟ್ಟಿಮನಿ, ನವೀನ ಬಂಡೆನ್ನವರ, ಲಕ್ಷ್ಮೀ ಕೆರೂರ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.