ಶೀಘ್ರದಲ್ಲಿಯೇ ಮಾಜಿ ದೇವದಾಸಿ ತಾಯಂದಿರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸಮೀಕ್ಷೆ ಪ್ರಕ್ರಿಯೆ: ದೋಟಿಹಾಳ
ವಿಜಯಪುರ,ಸೆ.14: ಮುಂದಿನ ತಿಂಗಳು ಮಾಜಿ ದೇವದಾಸಿ ತಾಯಂದಿರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತು ಸಂಪೂರ್ಣ ಸಮೀಕ್ಷೆ ಮಾಡಿ, ಸಮೀಕ್ಷೆಯಿಂದ ಹೊರಗೆ ಉಳಿದವರನ್ನು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುವುದು ಎಂದು ಕುಷ್ಟಗಿ ವಿಮುಕ್ತ ದೇವದಾಸಿ ವೇದಿಕೆ ಕಾರ್ಯದರ್ಶಿ ವಿರೂಪಮಾ ದೋಟಿಹಾಳ ಅವರು ತಿಳಿಸಿದರು.
ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಜೀವನ ಜ್ಯೋತಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟ ಇವರ ಸಹಯೋಗದಲ್ಲಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಮುಕ್ತ ದೇವದಾಸಿ ತಾಯಂದಿರ ರಾಜ್ಯ ಮಟ್ಟದ ವೇದಿಕೆಯು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪರಿಣಾಮವಾಗಿ ಸರ್ಕಾರ ಮಾಜಿ ದೇವದಾಸಿಯರ ಜೀವನದ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಮುಂದಾಗಿದೆ ಎಂದರು.
ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ ಸುಮಾರು 90000 ಮಾಜಿ ದೇವದಾಸಿ ತಾಯಂದಿರು ಇದ್ದು, ಅವರಲ್ಲಿ ಸರ್ಕಾರ 2011 ರಲ್ಲಿ ಸಮೀಕ್ಷೆ ಮಾಡಿರುವ ಪ್ರಕಾರ 46000 ಮಾಜಿ ದೇವದಾಸಿ ತಾಯಂದಿರು ದೇವದಾಸಿ ಪುನರವಸತಿ ನಿಗಮದಲ್ಲಿ ನೋಂದಣಿಯಾಗಿದ್ದಾರೆ. ಇನ್ನು 45000 ಮಾಜಿ ದೇವದಾಸಿ ತಾಯಂದಿರು ಸಮೀಕ್ಷೆಯಿಂದ ಹೊರಗೆ ಉಳಿದು ನೋಂದಣಿಯಾಗದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಮಾಜಿ ದೇವದಾಸಿ ತಾಯಂದಿರ ಪುನರ್ ಸಮೀಕ್ಷೆಗೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗಿತ್ತು. ಸರ್ಕಾರ ಸ್ಪಂದಿಸಿ ಸಮೀಕ್ಷೆಗೆ ಕ್ರಮ ಕೈಗೊಳ್ಳಲಿದೆ ಎಂದರು.
ಮಾಜಿ ದೇವದಾಸಿ ತಾಯಂದಿರು ಹಾಗೂ ಅವರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಾದ ವಸತಿ ಯೊಜನೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮಾಜಿ ದೇವದಾಸಿ ತಾಯಂದಿರ ಮಕ್ಕಳಿಗೆ ಸ್ವ- ಉದ್ಯೋಗ ಕೈಗೊಳ್ಳಲು ಎಸ್‍ಸಿ/ಎಸ್‍ಟಿ ನಿಗಮದಿಂದ ತಾಂತ್ರಿಕ ತರಬೇತಿ ಹಾಗೂ ಸಾಲ ಸೌಲಭ್ಯ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಆರೋಗ್ಯ ವಿಮೆ ಹೀಗೆ ಮಾಜಿ ದೇವದಾಸಿ ತಾಯಂದಿರ ಅಗತ್ಯತೆಗಳನ್ನು ಹಾಗೂ ಸಂವಿಧಾನ ಬದ್ಧಬಾಗಿ ಗೌರವಾನ್ವಿತÀ ಬದುಕು ಸಾಗಿಸಲು ಹಾಗೂ ಅವರಿಗೆ ಯೋಜನೆಗಳನ್ನು ರೂಪಿಸಲು ಸುಮಾತು 10 ವರ್ಷದಿಂದ ರಾಜ್ಯ ಮಟ್ಟದ ವೇದಿಕೆಯಿಂದ ಮನವಿ ಸಲ್ಲಿಸುತ್ತ, ಭೇಟಿಯಾಗುತ್ತ ಸತತ ಪ್ರಯತ್ನದ ಫಲವಾಗಿ 2024-25 ನೇ ಸಾಲಿನ ಸರ್ಕಾರದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೆಜ್ ಘೋಷಣೆ ಮಾಡಿದ್ದಾರೆ. ಇದು ನಮ್ಮೆಲ್ಲರ ಹೋರಾಟದ ಗೆಲುವು ಆಗಿದೆ. ಆದರೆ ಘೋಷಣೆಯಾದ ವಿಶೇಷ ಪ್ಯಾಕೇಜ್ ಅನುಷ್ಠಾನಗೊಂಡು ನಮ್ಮ ಕೈ ಸೇರುವವರೆಗೂ ನಾವು ಒಗ್ಗಾಟ್ಟಾಗಿ ಹೋರಾಟ ಮಾಡಲೇಬೆಕು. ಮಾಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ನಾವು ಎಲ್ಲರೂ ಸಂಘಟಿತರಾಗಿ ಗೌರವಾನ್ವಿತÀ ಬದುಕು ಕಟ್ಟಿಕೊಳ್ಳಲು ಬದ್ಧರಾಗಿ ನಿರಂತರವಾಗಿ ಹೋರಾಟ ಮಾಡೋಣ ಎಂದು ಹೇಳಿದರು.
ಅಧಕ್ಷ್ಯತೆ ವಹಿಸಿದ ಫಾದರ್ ಟಿಯೋಲ್ ಮಚಾದೊ ಅವರು ಮಾತನಾಡಿ, ಮಾಜಿ ದೇವದಾಸಿ ತಾಯಂದಿರು ಸರ್ಕಾರದ ವಿವಿಧÀ ಯೋಜನೆಗಳನ್ನು ಪಡೆದುಕೊಂಡು ಸ್ವ-ಉದ್ಯೋಗ ಕೈಗೊಳ್ಳಬೇಕು. ಆರ್ಥಿಕವಾಗಿ ಸಬಲರಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ಕಾರ್ಯಕ್ರಮದಲ್ಲಿ ಜೀವನ ಜ್ಯೋತಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟ ಅಧ್ಯಕ್ಷೆ ರೇಣುಕಾ ಎಂಟಮಾನ, ಸಿಸ್ಟರ್| ಜಯಾ ಸಿಸ್ಟರ್ ಸಿಬಿÀ ಮತ್ತಿತರರು ಉಪಸ್ಥಿತರಿದ್ದರು.
ಸಮಾವೇಶದ ನಂತರ ಎಲ್ಲ ಮಾಜಿ ದೇವದಾಸಿ ತಾಯಂದಿರು ತಮ್ಮ ಹಕ್ಕುಗಳಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೀವನಜ್ಯೋತಿ ಮಾಜಿ ದೇವದಾಸಿ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳಾದ ಮಲ್ಲಮ್ಮ ಚಲವಾದಿ, ಇಂದ್ರವ್ವ ಕಟ್ಟಿಮನಿ, ರೇಣುಕಾ ಕಾಂಬಳೆ, ಚಂದಾಬಾಯಿ ಮಾದರ, ಶಾಂತಾಬಾಯಿ ಹತ್ತರಕಿಹಾಳ, ಗಂಗವ್ವ ಕುದರಿ, ಪದ್ಮವ್ವ ಮಾದರ, ರೇಷ್ಮಾ ಕಟ್ಟಿಮನಿ, ಮೀನಾಕ್ಷಿ ಸಿಂಗೆ, ಸುನೀತಾ ಮೊರೆ, ಅನಸೂಯಾ ತೊನಶ್ಯಾಳ, ಮುದ್ದುರಾಜ ಪರಶುರಾಮ ಪಂಕಜ ಭುವನೇಶ್ವರಿ, ಕಾವೇರಿ ಇತರರು ಭಾಗಿಯಾಗಿದ್ದರು.