ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಗೆ ಆಯ್ಕೆ
ತಾಳಿಕೋಟೆ:ಸೆ.14: ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ನಡೆದ ತಾಳಿಕೋಟೆ ಕ್ಲಸ್ಟರ್ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕು: ಮಮತಾಜ್ ದೊಡಮನಿ (ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ), ಕು: ಶ್ರೀರಕ್ಷ ಚಿಮ್ಮಲಗಿ (ಭರತನಾಟ್ಯ ಪ್ರಥಮ ಸ್ಥಾನ), ಕು : ರಾಕೇಶ ಚೊಕಾವಿ (ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ), ಕು : ಭರತರಾಜ್ ಹುಗ್ಗಿ ಮತ್ತು ರಾಜವರ್ಧನ್ ಸಿಂಗ್ ರಾಥೋಡ(ಕ್ವಿಜನಲ್ಲಿ ದ್ವಿತೀಯ), ಕು : ಲಕ್ಷ್ಮಿ ದೇವರು(ಭಾವಗೀತೆಯಲ್ಲಿ ದ್ವಿತೀಯ ಸ್ಥಾನ), ಕು : ಮಲ್ಲಿಕಾರ್ಜುನ ಮೈಲೇಶ್ವರ (ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ), ಕು : ಸೃಜನ ಕಾ ಸಜ್ಜನ (ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ), ಕು : ಶ್ರೇಯಾ ಪಾಟೀಲ (ಚಿತ್ರಕಲೆ ತೃತೀಯ ಸ್ಥಾನ) ಕು : ಸನ್ನತಿ ಜೋಶಿ (ಧಾರ್ಮಿಕ ಪಠಣ ಸಂಸ್ಕೃತ ತೃತೀಯ ಸ್ಥಾನ) ಕುಮಾರಿ ಜಯಶ್ರೀ ಬಿಳೇಬಾವಿ (ಕನ್ನಡ ಭಾಷಣ ತೃತೀಯ ಸ್ಥಾನ) ಕು :ರುಚಿ ಕೊಡಗಾನೂರ (ಭರತನಾಟ್ಯ ತೃತೀಯ ಸ್ಥಾನ), ಕು : ಅನ್ನಪೂರ್ಣ ತಳಗೇರಿ(ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ) ಪಡೆದಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ ತೋರಿದ ಹಾಗೂ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖ್ಯ ಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ, ಶಿಕ್ಷಕರಾದ ರಾಜು ಜವಳಗೇರಿ, ಎಂ.ಬಿ. ಹಿರೇಗೌಡರ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ವಿಜಯಕುಮಾರ ಹಳಿಯಾಳ, ರಸೂಲಸಾ ತುರ್ಕಣಿಗೇರಿ, ಸಿದ್ದನಗೌಡ ಚೌದರಿ, ಶರಣಗೌಡ ಕಾಚಾಪುರ, ಸಂಜುಕುಮಾರ ಭಜಂತ್ರಿ, ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚೂರ, ಪುಷ್ಪ ನಾಡಗೌಡ, ಪಲ್ಲವಿ ಕಸ್ತೂರಿ, ಲಕ್ಷ್ಮಿ ಚುಂಚುರ, ದೇವೇಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ರಾಣಿ, ರಾಜಬಿ ಬಿದರಿ, ಪುಷ್ಪ ನಾಡಗೌಡರ, ಕಲ್ಪನಾ ಹಜೇರಿ, ಪಲ್ಲವಿ ಕಸ್ತೂರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಶಂಕ್ರಮ್ಮ, ಮೇಘಾ ಪಾಟೀಲ, ಮುಬಿನ ಮುರಾಳ, ಅವರು ಅಭಿನಂದಿಸಿದ್ದಾರೆ.