ನಾಳೆ ರಾಯಚೂರಿನಲ್ಲಿ ಮುಖ್ಯಮಂತ್ರಿಯವರಿಂದ ಗೋಕಾಕ ಚಳವಳಿಯ ಹೋರಾಟಗಾರ ಶಿವಶರಣಪ್ಪಾ ವಾಲಿ ಅವರಿಗೆ ಸನ್ಮಾನ
ಬೀದರ: ಅ.4:ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ. ಉಸಿರಾಗಲಿ ಕನ್ನಡದ ಅಂಗವಾಗಿ ಗೋಕಾಕ ಚಳವಳಿ ಹಿನ್ನೋಟ-ಮುನ್ನೋಟ ಸಶಕ್ತ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದಿಕ್ಕೂಚಿ ನಡೆ ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಯ ಹಿರಿಯ ಹೋರಾಟಗಾರರಾದ ಪತ್ರಕರ್ತ ಶ್ರೀ ಶಿವಶರಣಪ್ಪಾ ವಾಲಿ ಅವರ ಸನ್ಮಾನ ಕಾರ್ಯಕ್ರಮ ಅಕ್ಟೊಬರ್ 5 ರಂದು ರಾಯಚೂರದಲ್ಲಿ ಆಯೋಜಿಸಲಾಗಿದೆ
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತ ವತಿಯಿಂದ ಇಲ್ಲಿಯ ಇದೇ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು 40 ವರ್ಷಗಳ ಹಿಂದೆ ಗೋಕಾಕ ಕನ್ನಡ ಚಳುವಳಿಯು ಶ್ರೀ ಶಿವಶgಣÀಪ್ಪಾ ವಾಲಿಯವರ ನೇತೃತ್ವದಲ್ಲಿ ನಡೆದು ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಧ್ಯಪಕರು, ಕನ್ನಡ ಪ್ರೇಮಿಗಳು ಸೇರಿದಂತೆ ಸುಮಾರು 15 ಜನರು ಬೀದರನ ಜೈಲುವಾಸ ಅನುಭವಿಸಿದ್ದಾರೆ.
ರಾಜ್ಯ ಸರ್ಕಾರವು ಗೋಕಾಕ ಚಳುವಳಿಯ 40 ವರ್ಷ ಪೂರ್ಣಗೊಂಡ ನಿಮಿತ್ಯ ಚಳುವಳಿಯಲ್ಲಿ ಪಾಲ್ಗೊಂಡ ಹೊರಾಟಗಾರನ್ನು ಗುರುತಿಸಿ ರಾಯಚುರಿನಲ್ಲಿ ಸನ್ಮಾನಿಸಲು ನಿರ್ಧರಿಸಿದೆ ಜಿಲ್ಲೆಯ ಹಿರಿಯರಾದ ಶಿವಶರಣಪ್ಪಾ ವಾಲಿ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಯ 5 ಜನರನ್ನು ಮುಖ್ಯಮಂತ್ರಿ ಸಿದ್ರಾಮಯ್ಯಾ ಸೇರಿದಂತೆ ಇನ್ನಿತ್ತರ ಸಚಿವರು ಉಪಸ್ಥಿತರಿದ್ದು ಗೌರವಿಸಲಿದ್ದಾರೆ.