ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಕಾರ್ಯಕ್ರಮ
ಬೀದರ: ಅ.4:ಬ್ರೆಡ್ಸ್ ಬೆಂಗಳೂರು ಮತ್ತು ಡಾನ್ ಬೊಸ್ಕೊ ಬೀದರ ನಗರದ ಡಾನ್ ಬೊಸ್ಕೊ ಹಾಗೂ ಮೊಬೈಲ್ ಕ್ಲಿನಿಕ್ ಸ್ಟಾಫ್ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ಡಾನ್ ಬೊಸ್ಕೊ ಶಾಲೆಯಿಂದ ಚಿಕಪೇಟ್ ಅಂಬೇಡ್ಕರ ವೃತ್ತದವರೆಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸಂದೀಪ, ಶುಶ್ರೂಷಕಿ ಆಶಾಲತಾ, ಆಶಾ ಕಾರ್ಯಕರ್ತೆಯಾದ ಶಾಂತಮ್ಮ, ಗ್ರಾ.ಪಂ. ಸದಸ್ಯರಾದ ಸಂತೋಷ, ಫಾದರ್ ಮ್ಯಾಥಿವ್, ಫಾದರ್ ಸ್ಟೀವನ್, ಫಾದರ್ ಪ್ರವೀಣ, ಫಾದರ್ ಸೋನುಚಂದ ಮ್ಯಾಥ್ಯು, ಮೊಬೈಲ್ ಕ್ಲಿನಿಕ್ ಸ್ಟಾಫ್‍ಗಳಾದ ಥಾಮಸ್, ಸಿಮೋನ್, ರಾಜಶ್ರೀ, ಶರ್ಲಿನ್ ಇನ್ನೀತರರು ಉಪಸ್ಥಿತರಿದ್ದರು.