ಹಿಂದಿ ಭಾರತಿಯರನ್ನು ಒಂದುಗೂಡಿಸುವ ಭಾಷೆ : ಅನಿರ್ಭನ್ ಕುಮಾರ್ ಬಿಸ್ವಾಸ್
ಕಲಬುರಗಿ:ಅ.4:”ಹಿಂದಿ ಭಾರತಿಯರನ್ನು ಒಂದುಗುಡಿಸುವ ಭಾಷೆ ” ಎಂದು ಭಾರತ ಸರ್ಕಾರದ ರಾಜ (ಹಿಂದಿ) ಭಾಷೆ ಇಲಾಖೆಯ ಉಪ ನಿರ್ದೇಶಕ ಅನಿರ್ಭನ್ ಕುಮಾರ್ ಬಿಸ್ವಾಸ್ ಹೇಳಿದರು. ಇಂದು ಅವರು ಸಿಯುಕೆಯಲ್ಲಿ ರಾಜ ಭಾಷೆ ಅನುμÁ್ಠನದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಹಿಂದಿ ಭಾರತದ ಭಾಷೆ . ಹಿಂದಿ ಭಾಷೆ ಯ ಮೂಲಕ ನಾವು ದೇಶದ ಎಲ್ಲ ಜನರನ್ನು ಸಂಪರ್ಕಿಸಬಹುದು. ಹಿಂದಿ ಕಲಿಯುವುದರಿಂದ ಜನರು ವಂಚಿತರಾಗಬಾರದು. ಹಿಂದಿ ಭಾಷೆ ಯ ಜ್ಞಾನವು ದೇಶದ ಯಾವುದೇ ಭಾಗಗಳಲ್ಲಿ ಕೆಲಸ ಮಾಡಲು ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತದೆ. ಈಗ ಹಿಂದಿ ಜತೆಗೆ ಪ್ರಾದೇಶಿಕ ಭಾಷೆ ಗಳಿಗೂ ಬೇಡಿಕೆ ಹೆಚ್ಚಿದೆ. ಜನರು ಹೆಚ್ಚು ಹೆಚ್ಚು ಉದ್ಯೋಗ ಅರ್ಹರನ್ನಾಗಿ ಮಾಡಲು ನಾವು ಸಾಧ್ಯವಾದಷ್ಟು ಭಾಷೆ ಗಳನ್ನು ಕಲಿಸಬೇಕಾಗಿದೆ. ಅನೇಕ ಜನರು ತಮ್ಮ ತವರು ರಾಜ್ಯದಿಂದ ಹೊರಬರುವುದನ್ನು ತಪ್ಪಿಸಲು ಪದೋನ್ನತಿ ತೆಗೆದುಕೊಳ್ಳುತ್ತಿಲ್ಲ. ಹಿಂದಿ ಕಲಿಸುವ ಮೂಲಕ ಜನರನ್ನು ಸಬಲೀಕರಣಗೊಳಿಸಬೇಕಾಗಿದೆ. ಹಿಂದಿ ಕಲಿಯಲು ಜನರನ್ನು ಪೆÇ್ರೀತ್ಸಾಹಿಸಿ ಮತ್ತು ಆಸಕ್ತಿ ಇರುವವರಿಗೆ ತರಬೇತಿ ನೀಡಿ” ಎಂದು ಅವರು ಸಿಯುಕೆಯ ಅಧಿಕಾರಿಗಳಿಗೆ ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಮಾತನಾಡಿ, “ಸಿಯುಕೆ ರಾಜ ಭಾಷೆ ಯ ಪ್ರಚಾರಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಹಿಂದಿ ಕಲಿಯಲು ಉತ್ತೇಜಿಸಲು ನಾವು ವಿಶೇಷ ತರಬೇತಿ ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಬಿ.ರಾಮದೊರೈ, ಪರಿಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಪೆÇ್ರ.ಗಣೇಶ್ ಪವಾರ್, ಪೆÇ್ರ.ವಿಕ್ರಂ ವಿಸಾಜಿ, ಡಾ.ಪಿ.ಎಸ್.ಕಟ್ಟಿಮನಿ, ಡಾ.ಗಣಪತಿ ಬಿ.ಸಿನ್ನೂರ್, ಡಾ.ಅಜರುದ್ದೀನ್, ವಿನೋದ ತಾಂಡೂರಕರ್, ಸಿಯುಕೆಯ ರಾಜ ಭಾμÁ ವಿಭಾಗದ ಉಪನಿರ್ದೇಶಕರಾದ ಡಾ.ರೇಸ್ಮಾ ನದಾಫ್, ಕಲಬುರಗಿ ನಗರ ರಾಜ ಭಾμÁ ಅನುμÁ್ಠನ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಹೀರಾಸಿಂಗ್ ರಾಠೋಡ್, ಬಿಎಸ್‍ಎನ್‍ಎಲ್ ನ ಆಡಳಿತ ವಿಭಾಗದ ಎಜಿಎಂ ಸಂಜೀವಕುಮಾರ ಕಸಬೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.