ಯು.ಜಿ.ಸಿ ನಿಯಮಾವಳಿ ಅನುಸರಿಸದಿರಲು ಅತಿಥಿ ಉಪನ್ಯಾಸಕರ ಸಂಘ ಆಗ್ರಹ
ಬೀದರ್:ಅ.4: 2024-25 ನೇ ಸಾಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಕೊರ್ಟ ಆದೇಶದ ಪ್ರಕಾರ ಕಾಲೇಜು ಶಿಕ್ಷಣ ಇಲಾಖೆ ಯು,.ಜಿ.ಸಿ ನಿಯಮಾವಳಿಗಳನ್ನು ಅತಿಥಿ ಉಪನ್ಯಾಸಕರ ನೇಮಕಾತಿಗಳಲ್ಲಿ ಅನುಸರಿಸಿದ್ದರೆ ಸುಮಾರು 5000 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳಿದುಕೊಂಡು ಬೀದಿಗೆ ಬರಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಈ ನಿಯಮ ಅತಿಥಿ ಉಪನ್ಯಾಸಕರಿಗೆ ಅನುಸರಿಸದಿರಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ನಾರಾಯಣಪುರ ಅವರು, ವರದಿ ಕರ್ನಾಟಕ ರಾಜ್ಯದಲ್ಲಿ ಸುಮಾರು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು ಸುಮಾರು 11000 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು 15-20 ವರ್ಷದಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತಾರೆ ಅದರಲ್ಲಿ ಶೇ 50% ರಷ್ಟು ಆತಥಿ ಉಪನ್ಯಾಸಕರು ನೀಟ್, ಸೆಟ್, ಎಂಫಿಲ್, ಪಿ.ಹೆಚ್.ಡಿ ಪದವಿಗಳನ್ನು ಯು.ಜಿ.ಸಿ ಅನಿಯಮನುಸಾರ ಅರ್ಹತೆ ಹೊಂದಿದವರಾಗಿದ್ದಾರೆ. ಆದರೆ ದಿಢಿರನೆ ಸರ್ಕಾರ ಯು.ಜಿ.ಸಿ ಅನಿಯಮದ ಪ್ರಕಾರ ಅತಿಥಿ ಉಪನ್ಯಾಸಕರ ನೇಮಕಾತಿ ಸರ್ಕಾರ ಮಾಡಿಕೊಳ್ಳಲು ಮುಂದಾದರೆ ಶೆ 55% ರಷ್ಟು ಅಂದರೆ 5800 ಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬರುತ್ತವೆ. ಸಾಕಷ್ಟು ಸಂಕಷ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕೋರ್ಟ ಆದೇಶದ ಅನ್ವಯ, ಕಾಲೇಜು ಶಿಕ್ಷಣ ಇಲಾಖೆ ಯು.ಜಿ.ಸಿ ನಿಯಮಾವಳಿ ಕಟ್ಟು ನಿಟ್ಟಾಗಿ ಪಾಲಿಸಿದರೆ, ಸಾಕಷ್ಟು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಸರಕಾರ ಕೊಡುವ ಕಡಿಮೆ ಸಂಭಾವನೆಯಲ್ಲಿ ಕೆಲಸ ಮಾಡುತ್ತಾ ಬಂದಿರುವ ಉಪನ್ಯಾಸಕರ ಸ್ಥಿತಿ ಶೋಚನಿಯವಾಗಲಿದೆ. ಸಾಕಷ್ಟು ಜನರ ಅತಿಥಿ ಉಪನ್ಯಾಸಕರ ವಯಾಮಿತಿ 50-55 ವರ್ಷಗಳು ದಾಟಿವೆ. ಇನ್ನು ಹಲವು ಅತಿಥಿ ಉಪನ್ಯಾಸಕರುಗಳು ಸರಕಾರದ ಯಾವುದೆ ಹುದ್ದೆಗಳನ್ನು ಕರೆದರು ಅರ್ಜಿ ಸಲ್ಲಿಸಲು ವಯಾಮಿತಿ ಮಿರಿದೆ, ಇದರಿಂದ ಸುಮಾರು 5800 ಕ್ಕಿಂತ ಹೆಚ್ಚು ಕುಟುಂಬಗಳ/ಅತಿಥಿ ಉಪನ್ಯಾಸಕ ವೃತ್ತಿಯನ್ನು ಅವಲಂಬಿಸಿರುವ ಕುಟುಂಬಗಳು ಬೀದಿಗೆ ಬೀಳುತ್ತವೆ. ಈ ವೃತ್ತಿ ಬಿಟ್ಟು ಬೇರೆ ವೃತ್ತಿಗಳಲ್ಲಿ ತೊಡಗಲು ಸಾದ್ಯವೆ ಇಲ್ಲ ಎಂದರು.
ಕಳೆದ ಇದೆ ವರ್ಷದ ಆಗಸ್ಟ 6 ರಂದು ಸರಕಾರ ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಗೊಳಿಸಿದೆ, 10 ತಿಂಗಳ ವರೆಗೆ ಪ್ರತಿ ವರ್ಷ ನೇಮಾಕಾತಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರಿಗೆ ಸರಕಾರ ವೇತನ ಹೆಚ್ಚಿಸಿ ಹಲವಾರು ಬೇಡಿಕೆಗಳನ್ನು ಈಡೆರಿಸಲು ಮುಂದಾಗಿದೆ ಆದರೆ ಹಲವಾರು ಕನಸುಗಳನ್ನು ಕಟ್ಟಿಕೊಂಡು ಅತಿಥಿ ಉಪನ್ಯಾಸಕರು ಹಲವಾರು ವರ್ಷದ ಸೇವಾನುಭವ ಇದೆ ಆದರೆ ಯು.ಜಿ.ಸಿ ಅರ್ಹತೆ ಹೊಂದಿರುವುದಿಲ್ಲ ಎಂಬ ಕಾರಣಕ್ಕಾಗಿ ಇವರನ್ನು ಕೈ ಬಿಟ್ಟರೆ ಸಾಕಷ್ಟು ಜನರ ಬದಕು ಆತಂತ್ರ ಸಂಕಷ್ಟಗಳಿಗೆ ಸಿಲುಕಬೇಕಾಗುತ್ತದೆ ಎಂದರು.
ಕೊರ್ಟ ಆದೇಶ ಪಾಲಿಸುವ ಸರಕಾರಗಳು ಈ ಹಿಂದೆ ಕೊರ್ಟ ಆದೇಶ ಮಾಡಿದ. 10 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಸೇವಾನುಭವ ಆಧಾರದ ಮೇಲೆ ಖಾಯಂ ಮಾಡಿ ಎಂದು ಹೇಳಿದೆ, ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಲು ಹೇಳಿದೆ. ರಾಷ್ಟ್ರದಲ್ಲಿ ಯು.ಜಿ.ಸಿ ನಿಯಮ ಒಂದೆ ಇವೆ ಆದರೆ ಕೆಲವು ರಾಜ್ಯಗಳಲ್ಲಿಯು ಯು.ಜಿ.ಸಿ ಅರ್ಹತೆ ಹೊಂದಿರುವವರು ಹಾಗು ಯು.ಜಿ.ಸಿ ಅನರ್ಹತೆ ಹೊಂದಿದ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸಲು ಪಂಜಾಬ, ಹರಿಯಾಣ, ದೇಹಲಿ, ಇತ್ಯಾದಿ ಕಡೆಗಳಲ್ಲಿ ಒಂದೇ ನಿಯಮ ಇರುವಾಗ ನಮ್ಮ ರಾಜ್ಯದಲ್ಲಿ ಬೇರೆ ನಿಯಮ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಯು.ಜಿ.ಸಿ ನಿಯಮ ಬದಿಗಿರಿಸಿ, ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕೆಂದು ನಾರಾಯಣಪುರ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕರ ಹೊರಾಟ ಸಮಿತಿ ಪದಾಧಿಕಾರಿಗಳಾದ ಡಾ.ಏಕನಾಥ ಹಲಸೆ, ಜಾವಿಧ, ಡಾ.ಚೇತನ, ಶಾಮಸುಂದರ, ವನಿತಾಬಾಂಗೆ, ಬಂಡೆಪ್ಪ ಬಾಲಕಂದೆ ಸಂದೀಪ ಕುಲಕರ್ಣಿ ಮಲ್ಲಿಕಾರ್ಜುನ ಹಾಗೂ ಇತರರು ಉಪಸ್ಥಿತರಿದ್ದರು.