ಲಾರಿ ಹರಿದು ಇಬ್ಬರು ಬೈಕ್ ಸವಾರರ ಸಾವು :ಗ್ರಾಮಸ್ಥರ ಪ್ರತಿಭಟನೆ
ವಿಜಯಪುರ,ಅ.4:ಬೈಕ್ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.
ಮನಗೂಳಿ ಪಟ್ಟಣದ ಭೀಮಶಿ ಹಿಟ್ನಳ್ಳಿ (56) ಹಾಗೂ ಖಂಡೋಬಾ ಘೋರ್ಪಡೆ (60) ಮೃತಪಟ್ಟ ಬೈಕ್ ಸವಾರರು.
ಬೈಕ್ ಸವಾರರ ಸಾವಿಗೆ ಸರಕು ಸಾಗಣೆ ವಾಹನ ಚಾಲಕನ ನಿರ್ಲಕ್ಷವೇ ಕಾರಣವೆಂದು ಆರೋಪಿಸಿ ಮನಗೂಳಿ ಪಟ್ಟಣದ ಜನತೆ ರೊಚ್ಚಿಗೆದ್ದು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ರಸ್ತ ಮಧ್ಯೆದಲ್ಲಿ ಕುಳಿತು ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಇಳಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ- 50ನ್ನು ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರಿಂದ
ವಾಹನಗಳು ಸಾಲುಗಟ್ಟಿ ನಿಂತಿವೆ.
ಸಾವಿಗೀಡಾದ ಬೈಕ್ ಸವಾರರ ಕುಟುಂಬಕ್ಕೆ ಪರಿಹಾರ ನೀಡಬೇಕು. ಈ ಭಾಗದಲ್ಲಿ ಮೇಲ್ಸೆತುವೆ ನಿರ್ಮಿಸಬೇಕೆಂದು ಒತ್ತಾಯಿಸಿ ಮನಗೂಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಮನಗೂಳಿ ಪೆÇಲೀಸರು ದೌಡಾಯಿಸಿ ಪ್ರತಿಭಟನೆ ಕೈ ಬಿಡುವಂತೆ ಪ್ರತಿಭಟನಾ ನಿರತರ ಮನವೊಲಿಕೆಗೆ ಯತ್ನ ನಡೆಸಿದ್ದು, ಆದರೆ ಗ್ರಾಮಸ್ಥರು
ಪೆÇಲೀಸರ ಮನವೊಲಿಕೆಗೆ ಜಗ್ಗದೆ ಪ್ರತಿಭಟನೆ ಮುಂದುವರೆಸಿದ್ದಾರೆ.
ಮನಗೂಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.