ಶರನ್ನವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ
ಹುಬ್ಬಳ್ಳಿ, ಅ4: ಅರವಿಂದ ನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಪ.ಪೂ. ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ದೇವಿಯವರ ಘಟ್ಟಸ್ಥಾಪನೆ ಮಾಡಿ, ದೀಪ ಬೆಳಗಿಸುವುದರೊಂದಿಗೆ ಶರನ್ನವರಾತ್ರಿ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸುಮಂಗಲೆಯರು ಶ್ರೀ ಲಿಲತ ಸಹಸ್ರ ನಾಮಾವಳಿ ಸ್ತೋತ್ರ ಪಠಣೆ ಮಾಡಿದರು. ಈ ಸಂದರ್ಭದಲ್ಲಿ ಹೈಕೋರ್ಟ ನ್ಯಾಯವಾದಿ ಡಾ. ಹೇಮಂತ್ ಕರ್ಜಗಿ, ಬಿಜೆಪಿ ಮುಖಂಡ ತೋಟಪ್ಪ ನಿಡಗುಂದಿ, ಸಂಜು ಬುಗಡಿ, ವಿಠ್ಠ¯ ಏಕಬೋಟೆ, ಪ್ರಕಾಶ ಅರಗಂಜಿ, ಪರಶುರಾಮ ಸುಳ್ಳದ, ಲಕ್ಷ್ಮಣ ಡೋಂಗರೆ ಉಪಸ್ಥಿತರಿದ್ದರು. ಗುರು ಬನ್ನಿಕೊಪ್ಪರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನವರಾತ್ರಿಯ ನವ ದಿವಸಗಳವರೆಗೆ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಯವರು ಶ್ರೀ ದೇವಿ ಮಹಾತ್ಮೆಯ ಪುರಾಣವನ್ನು ಹೇಳುವರು. ದಿ. 10ರಂದು ಶ್ರೀ ದುರ್ಗಾಹೋಮ ನೆರವೇರುವುದು. ಶನಿವಾರ ದಿ: 24-10-2023 ರಂದು ವಿಜಯದಶಮಿ ಅಂಗವಾಗಿ ಪಲ್ಲಕ್ಕಿ ಉತ್ಸವ ಮೂಲಕ ಬನ್ನಿಮುಡಿಯುವ ಕಾರ್ಯಕ್ರಮ ಜರುಗುವುದು.