ನೀಲಹಳ್ಳಿ ಪ್ರೌಢ ಶಾಲೆ ಮಕ್ಕಳ ವಿಜ್ಞಾನ ನಾಟಕ ವಿಭಾಗ ಮಟ್ಟಕ್ಕೆ ಆಯ್ಕೆ
ಸೇಡಂ :ಸೆ.14:ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ದೇ ಮತ್ತು ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ದೇಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾ ಕಲಬುರಗಿ, ಭಾರತ ಸರಕಾರದ ಸಂಸ್ಕøತಿ ಸಚಿವಾಲಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪೂರ ಇವರ ನೆತೃತ್ವದಲ್ಲಿ ನಡೆಯಿತು.
ಸೇಡಂ ತಾಲೂಕಿನ ಸರಕಾರಿ ಪ್ರೌಢ ಶಾಲೆಯ ಮಕ್ಕಳು ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ದೇಯಲ್ಲಿ ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ನಿರ್ದೇಶನದ ಆರೋಗ್ಯ ಮತ್ತು ನೈರ್ಮಲ್ಯ ವಿಷಯವಾಧಾರಿತ ‘ಗಾಂಧಿ ಬಂದ’ ನಾಟಕ ಪ್ರಥಮ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿಯವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.
ಶಾಲಾ ಮುಖ್ಯ ಗುರುಗಳಾದ ಸುರೇಖಾ ವೆಂಕಟರಾವ, ಶಿಕ್ಷಕರುಗಳಾದ ಶಾರದಾ ಎಮ್, ಶಿವಾನಂದ ಇಟೀಕರ್, ಸುನಿತಾ ದೇವಾಪೂರ್, ಪೂರ್ಣಿಮಾ ಬೆಳಮಗಿ, ಬಿಸಮಿಲ್ಲಾ ಮಸುಲ್ದಾರ್, ರೇಣುಕಾ ಕೆ, ಕವಿತಾ ದೈ.ಶಿ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶರಣು ಜಮಾದಾರ, ಗ್ರಾಮದ ಮುಖಂಡರುಗಳಾದ ಅಶೋಕ ಸಾಹು, ಕಾಶಿನಾಥ ಮಡಿವಾಳ, ಮಂಜುನಾಥ ಸಾಹು, ವಿರೇಶ ಸೆಟ್ಟಿ, ಶರಣುಗೌಡ ಎಮ್.ಸಿ ಪಾಟೀಲ, ಗಣೇಶ ಕಂಬಾರ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ವಿಭಾಗ ಮಟ್ಟದ ವಿಜ್ಞಾನ ನಾಟಕಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದಿಸಿದ್ದಾರೆ.
ನಾಟಕದಲ್ಲಿ ಪಾತ್ರದಲ್ಲಿ ಮೈಲಾರಿ, ಭರತ, ನಾಜಿಯಾ, ಅಶೋಕ, ಚನ್ನಬಸವ, ಆದಿತ್ಯ, ಆಕಾಶ ಮತ್ತು ಸ್ವೆತಾ ಇದ್ದರು.