ಡಿಗ್ಗಿ : ಮಡಿವಾಳೇಶ್ವರ ಅದ್ಧೂರಿ ಪಲ್ಲಕ್ಕಿ ಮೆರವಣಿಗೆ
ಕಮಲನಗರ:ಸೆ.14: ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಅಣ್ಣನ-ಅಕ್ಕನ ಭಜನೆ ಮಂಡಳಿಯ ಬಳಗ ಮತ್ತು ಶ್ರೀ ಮಡಿವಾಳೇಶ್ವರ ದೇವಾಲಯ ಟ್ರಸ್ಟ್‍ನ ವಾರ್ಷಿಕೋತ್ಸವ ಹಾಗೂ ಮಲಗಂಬ ಉತ್ಸವ ಅಂಗವಾಗಿ ನಡೆದ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಈ ವೇಳೆ ಮಡಿವಾಳೇಶ್ವರ ಟ್ರಸ್ಟ್ ಅಧ್ಯಕ್ಷ ದೇವೇಂದ್ರ ಪಾಟೀಲ, ಉಪಾಧ್ಯಕ್ಷ ಕಾಶಿನಾಥ ಪಾಟೀಲ, ಕಾರ್ಯದರ್ಶಿ ಮಡಿವಾಳಪ್ಪ ಮುರ್ಕೆ ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಉದ್ಯಮಿ ಶಿವಲಿಂಗ ಸ್ವಾಮಿ ಬೆಂಬುಳಗೆ ಮಾರ್ಗದರ್ಶನದಲ್ಲಿ ಯುವಕರು, ಗಣೇಶ ಉತ್ಸವ ಸಮಿತಿ ಸದಸ್ಯರುಗಳ ನೃತ್ಯ ಗಮನ ಸೆಳೆಯಿತು.
ಮಡಿವಾಳೇಶ್ವರ ಟ್ರಸ್ಟ್ ಅಧ್ಯಕ್ಷರ ನೇತೃತ್ವದಲ್ಲಿ ಭಾನುವಾರ ಸಂಜೆ ಮಲಗಂಬಕ್ಕೆ ದೀಪೆÇೀತ್ಸವ, ಪಾದಪೂಜೆ ಕಾರ್ಯಕ್ರಮ, ಸೋಮವಾರ ಮಡಿವಾಳೇಶ್ವರಿನೆ ವಿಶೇಷ ರುದ್ರಾಭೀಷೇಕ ಮತ್ತು ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ಅಧ್ಯಕ್ಷ ದೇವೆಂದ್ರ ಪಾಟೀಲ ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
ಡಿಗ್ಗಿ ಗ್ರಾಮದ ಮುಖ್ಯರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು, ವಯೋವೃದ್ಧರು, ಯುವಕರು ಹಾಗೂ ಚಿಕ್ಕ ಮಕ್ಕಳು ಭಾಗವಹಿಸಿದರು.
ಅಲ್ಲದೇ ಸರ್ಕಾರಿ ಪ್ರಾಥಮಿಕ ಶಾಲೆ ಡಿಗ್ಗಿ, ಭಾಗಿರಥಿ ಪಬ್ಲಿಕ್ ಶಾಲೆ ಕಮಲನಗರ, ಗೊಲ್ಡನ ವ್ಯಾಲಿ ಪಬ್ಲಿಕ್ ಶಾಲೆ, ಶರಣಬಸಪ್ಪ ಪಬ್ಲಿಕ್ ಶಾಲೆ, ಗುರಪ್ಪ ಟೊಣ್ಣೆ ಶಾಲೆ, ಸಿದ್ಧಮ್ಮಾ ಶಾಲೆ ಮಕ್ಕಳು ಕೋಲಾಟ, ಭಜನೆ ಪದಗಳ ಹಾಡಿಗೆ ಮಹಿಳೆಯರು, ಡಿಜಿ ಸೌಂಡ್‍ಗೆ ಯುವಕರು ವಿಶೇಷ ನೃತ್ಯ ಮೂಲಕ ವೈಭವದಿಂದ ಪಲ್ಲಕ್ಕಿ ಉತ್ಸವ ಆಚರಿಸಲಾಯಿತು.
ಅರ್ಚಕ ಚಂದ್ರಕಾಂತ ಹಿರೇಮಠ, ಮಾದಯ್ಯ ಸ್ವಾಮಿ, ಸದಸ್ಯ ಶಿವಕುಮಾರ ರಾಂಪೂರೆ, ವಿಜಯಕುಮಾರ ಪಾಟೀಲ, ಸೋಮನಾಥ ರಾಂಪುರೆ, ವೈಜಿನಾಥÀ ಕುಂಬಾರಗಿರೆ, ಸೂರ್ಯಕಾಂತ ಬಿರಾದಾರ, ಸಂಗಮನಾಥ ಬಿರಾದಾರ, ಗಿರಿರಾಜ ಸಿರಗಿರೆ, ಬಾಬುರಾವ ಹರಪಾಳೆ, ಭೀಮರಾವ ಪಾಟೀಲ, ವ್ಯವಸ್ಥಾಪಕ ಮನೋಜಕುಮಾರ ಹಿರೇಮಠ, ನಾಗಯ್ಯ ಸ್ವಾಮಿ, ಯುವರಾಜ ಚ್ಯಾಂಡೇಶ್ವರೆ, ನೀಲಮ್ಮಾ, ಪಾರಮ್ಮಾ, ಶಿವಲಿಂಗಯ್ಯಾ ಬೆಂಬುಳಗೆ, ಸೋಮನಾಥ, ಬಸವರಾಜ, ಬಾಲಾಜಿ, ಕಲ್ಯಾಣರಾವ, ಶಿವರಾಜ, ಮಡಿವಾಳಪ್ಪ, ಬಂಟಿ, ರಾಜಕುಮಾರ, ಆಕಾಶ, ಸಾಯಿನಾಥ, ಬಸವ, ಉಮಾಕಾಂತ, ಸುಭಾಷ, ಸಂಜೀವಕುಮಾರ, ಸತೀಷ, ಜಗದೀಶ, ಮಹೇಶ, ಮನೋಜಕುಮಾರ, ಸಂದೀಪ ಪಾಟೀಲ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.