ಧಮ್ಮಪಾಲ್ ಜಿ ಅವರ 160ನೇ ಜನ್ಮ ದಿನಾಚರಣೆ:5 ಲಕ್ಷ ಬೌದ್ಧರ ಸಾರ್ವಜನಿಕ ಸಭೆ ಮತ್ತು ಶಾಂತಿಯಾತ್ರೆ ಕರ ಪತ್ರ ಬಿಡುಗಡೆ
ಬೀದರ : ಸೆ.14:ನಗರದ ಡಾ|| ಬಿ.ಆರ್ ಅಂಬೇಡ್ಕರ ವೃತ್ತದಲ್ಲಿ ಇಂದು ಮುಂಜಾನೆ ಅಖಿಲ ಭಾರತ ಬೌದ್ಧ ವೇದಿಕೆ ಮತ್ತು ಭಾರತದ ಎಲ್ಲಾ ಬೌದ್ಧ ಸಂಘಟನೆಗಳ ಬ್ಯಾನರ್ ಅಡಿಯಲ್ಲಿ ಬೌದ್ಧಿಸತ್ವ ಅನಗಾರಿಕ ಧಮ್ಮಪಾಲ್ ಜಿ ಅವರ 160ನೇ ಜನ್ಮ ದಿನಾಚರಣೆ ಶುಭ ಸಂದರ್ಭದಲ್ಲಿ ಬೋಧ್‍ಗಯಾ ಬಿ.ಟಿ. ಕಾಯಿದೆ 1949 (ಬಿ.ಟಿ.ಎಮ್.ಸಿ.), ಕಾಯ್ದೆ ವಿರೋಧಿಸಿ 5 ಲಕ್ಷ ಬೌದ್ಧರ ಸಾರ್ವಜನಿಕರ ಸಭೆ ಮತ್ತು ಶಾಂತಿಯಾತ್ರಯ ಕರ ಪತ್ರಗಳನ್ನು ಇಂದು ಬೀದರ ನಗರದ ಡಾ|| ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪೂಜ್ಯ ಭಂತೆ ಜ್ಞಾನಸಾಗರ ಅವರ ನೇತೃತ್ವದಲ್ಲಿ ಹಾಗೂ ಭಿಕ್ಕು ಸಂಘದ ವತಿಯಿಂದ ಕರ ಪತ್ರ ಬಿಡುಗಡೆ ಮಾಡಲಾಗಿತ್ತು.
ಈ ಕರ ಪತ್ರ ಬಿಡುಗಡೆ ಮಾಡಿ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅನೀಲಕುಮಾರ ಬೆಲ್ದಾರ ರವರ ಮಾತನಾಡಿ ಬಿಹಾರ ನಗರದ ಪಟ್ನಾದಲ್ಲಿ ದಿನಾಂಕ: 17-09-2024 ರಂದು ಮಂಗಳವಾರ ಅಶೋಕ ಮೈದಾನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬೌದ್ಧ ಅನುಯಾಯಿಗಳು ಸೇರಿಕೊಂಡು ಭಿಕ್ಕು ರವರ ನೇತೃತ್ವದಲ್ಲಿ ಬಿ.ಟಿ.ಎಮ್.ಸಿ. ಕಾಯ್ದೆ ವಿರೋಧಿಸಿ ಬೃಹತ ಸಭೆ ಮತ್ತು ಶಾಂತಿಯಾತ್ರೆ ಕೈಗೊಳ್ಳಲಾಗಿದೆ.
ಆದ್ದರಿಂದ ಬೀದರ ಜಿಲ್ಲೆಯಲ್ಲಿರುವ ಬೌದ್ಧ ಉಪಾಸಕ ಉಪಾಸಕಿಯರು ಹಾಗೂ ಬೌದ್ಧ ಅನುಯಾಯಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡಿದರು. ಈ ಸಭೆಗೆ ಬರುವ ಬೌದ್ಧ ಅನುಯಾಯಿಗಳು ದಿನಾಂಕ: 15-09-2024 ರಂದು ಬೀದರ ನಗರದ ರೈಲ್ವೆ ನಿಲ್ದಾಣದಲ್ಲಿ ಮುಂಜಾನೆ 10 ಗಂಟೆಗೆ ಹೋರಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ಕರ ಪತ್ರದ ಬಿಡುಗಡೆಯಲ್ಲಿ ದಲಿತ ಸಂಘಟನೆಯ ಮುಖಂಡರಾದ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರುಗಳು ಭಾಗಿಯಾಗಿದ್ದರು ರಮೇಶ ಡಾಕುಳಗಿ, ಬಾಬುರಾವ ಪಾಸ್ವಾನ, ಬಸವರಾಜ ಮಾಳಗೆ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ರಾಜಕುಮಾರ ಬನೇರ, ಪ್ರಕಾಶ ಮಾಳಗೆ, ಶಾಲಿವಾನ ಬಡಿಗೇರ, ರಘುನಾಥ ಗಾಯಕವಾಡ, ರಾಜಕುಮಾರ ಗಾದಗಿ, ರಮೇಶ ಮಂದಕನಳ್ಳಿ, ಪ್ರದೀಪ ನಾಟೆಕರ, ಸಂದೀಪ ಕಾಂಟೆ, ವಿನೋದ ಬಂದ್ನಗೆ, ಬಾಬುರಾವ ಮೀಠಾರೆ, ದಶರಥ ಹೋಸಮನಿ, ಲಕ್ಕಿ ಭೀಮನಗರ ಇತರರು ಭಾಗಿಯಾಗಿದ್ದರು ಎಂದು ಈ ಪತ್ರಿಕಾ ಮುಖಾಂತರ ತಿಳಿಸಲಾಗಿದೆ.