ಬಿ.ಆರ್ ವಸತಿ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ಆಯ್ಕೆ
ಬೀದರ್: ಸೆ.14:ಪಟ್ಟಣದ ಮಹಾತ್ಮ ಗಾಂಧಿ ಪ್ರಾಥಮಿಕ ಶಾಲಾ ಅವರದಲ್ಲಿ ಆಯೋಜಿರುವ ಹೋಬಳಿ ಮಟ್ಟದ 2024 -25ರ ಸಾಲಿನಲ್ಲಿ ಕ್ರೀಡಾಕೂಟದಲ್ಲಿ ಹೋಬ್ಬಳಿ ಮಟ್ಟದಿಂದ ತಾಲೂಕ ಮಟ್ಟಕ್ಕೆ ವಿಧದ ಆಟದಲ್ಲಿ ಮಕ್ಕಳು ಆಯ್ಕೆಯಾಗಿರುತ್ತಾರೆ.
ಹೋಬ್ಬಳಿ ಮಟ್ಟದಿಂದ ಕ್ರೀಡಾಕೂಟದಲ್ಲಿ ಜಯ ಸಾಧಿಸಿದ ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆ (ಪ್ರೌಢಶಾಲೆ) ಮಕ್ಕಳು ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಖೋಖೋ ಪ್ರಥಮ ಸ್ಥಾನ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ರಾಜೇಂದ್ರ ನಿಟ್ಟೂರೆ. ತಾಲೂಕು ದೈಹಿಕ ಅಧ್ಯಕ್ಷರಾದ ರಾಮರಾವ್ ತೆಂಗಪೂರೆ ತಾಲೂಕು ದೈಹಿಕ ಗೌರವಾಧ್ಯಕ್ಷರಾದ ಯಶ್ವಂತ್ ಬಿರಾದರ್ ಮಾತ್ಮ ಶಾಲೆಯ ಮುಖ್ಯಗುರುಗಳಾದ ಮಡಿವಾಳಪ್ಪ ಮಹಾಜನ್ ಉದ್ದಿಮೆಗಳಾದ ಹಾಗೂ ದಾನಿಗಳಾದ ಅವಿನಾಶ್ ಶಿವಣಕರ ನಾಗರಾಜ್ ಬ್ರದರ್ ಅನಿಲ್ ಕುಮಾರ್ ವಿಶ್ವಕರ್ಮ ದೈಹಿಕ ಆಯೋಜಕರು ಕಂಟೆಪ್ಪ ಭವರಾ ದಯಾನಂದ ರಾಜೋಳೆ ಸಾಯಿನಾಥ್ ಲಖನ್ ಸುಲಾಖೆ ಹಲವಾರು ಉಪಸ್ಥಿತರಿದ್ದರು.