ಶಿವಯೋಗಿ ಜ್ಞಾನ ಮಂದಿರದ ನೂತನ ವಸತಿ ನಿಲಯಗಳ ಲೋಕಾರ್ಪಣೆ 18 ರಂದು
ಆಳಂದ: ಸೆ.14:ತಾಲೂಕಿನ ಸುಕ್ಷೇತ್ರ ಜಿಡಗಾ
ಪರಮ ಪೂಜ್ಯ ಷಡಕ್ಷರಿ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ 96 ನೇಯ ಜಯಂತೋತ್ಸವದ ಪ್ರಯುಕ್ತವಾಗಿ ಶಿವಯೋಗಿ ಜ್ಞಾನ ಮಂದಿರದ ಬಡವ ಮಕ್ಕಳ ಉಚಿತ ವಸತಿ ಶಿಕ್ಷಣದ ಹೈಟೇಕ ಮಾದರಿಯ ವಸತಿ ನಿಲಯಗಳ ಲೋಕಾರ್ಪಣೆ , ನಡೆಯುವುದು ಈ ಸಂದರ್ಭದಲ್ಲಿ ನೂರಾರು ಮಕ್ಕಳಿಗೆ ಶಾಲಾ ಕೀಟ್ ಹಾಗೂ ವಸತಿ ನಿಲಯ ಕೀಟ್ ವಿತರಣೆ ಹಾಗೂ ಭವ್ಯ ವೇದೀಕೆಯ ಕಾರ್ಯಕ್ರಮ ನಾಡೀನ ಅನೇಕ ಮಠಾಧೀಶರು ಹಾಗೂ ಶಿಕ್ಷಣ ಪ್ರೇಮಿಗಳು ರಾಜಕೀಯ ಧುರೀಣರ ಸಮ್ಮುಖದಲ್ಲಿ ನಡೆಯುವುದು,
ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ನವಕಲ್ಯಾಣ ಜಿಡಗಾ
ಶ್ರೀ ಮಠದಲ್ಲಿ ಪರಮ ಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಬಹುದಿನಗಳ ಕನಸ್ಸು ಬಡವ ಅನಾಥ ಮಕ್ಕಳ ಬದುಕಿಗೆ ಬೆಳಕಾಗಬೇಕು ಸಾವಿರಾರು ಮಕ್ಕಳ ಭವಿಷ್ಯವನ್ನ ಬೆಳಗಬೇಕೆಂಬುವ
ಪರಿಕಲ್ಪನೆ ಯೊಂದಿಗೆ ನವ ಕಲ್ಯಾಣ ಜಿಡಗಾ ಶ್ರೀ ಮಠದಲ್ಲಿ ಸಾವಿರ ಮಕ್ಕಳ ಉಚಿತ ವಸತಿ ಶಿಕ್ಷಣದ ಪರಿಕಲ್ಪನೆಯೊಂದಿಗೆ ನವಕಲ್ಯಾಣ ಜಿಡಗಾ ಶ್ರೀ ಮಠದಲ್ಲಿ ಈಗಾಗಲೇ ಶಿವಯೋಗಿ ಜ್ಞಾನ ಮಂದಿರದ ಮೂಲಕ ನೂರಾರು ಮಕ್ಕಳಿಗೆ ಉಚಿತ ವಸತಿ ಶಿಕ್ಷಣವನ್ನು ಪರಮಪೂಜ್ಯ ಶ್ರೀ ಗಳವರು ನೀಡುತ್ತಿದ್ದು ಕರ್ನಾಟಕ ರಾಜ್ಯದ ಎಂಟು ಜಿಲ್ಲೆಗಳಿಂದ ಬಡವ ಮತ್ತು ಅನಾಥ ಮಕ್ಕಳು ಶಿವಯೋಗಿ ಜ್ಞಾನ ಮಂದಿರದಲ್ಲಿ ಪ್ರವೇಶವನ್ನು ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ,
ವಿನೂತನ ಬೋಧನಾ ಮಾದರಿಯೊಂದಿಗೆ ವಿಶೇಷ ರೀತಿಯಾಗಿರುವಂತಹ ಊಟ ವಸತಿಯನೊಳಗೊಂಡಿರುವ ಸೌಲಭ್ಯವಿದೆ,
ಇಲ್ಲಿ ಪ್ರವೇಶಾತಿಯನ್ನ ಪಡೆದಿರುವ ಮಗು ಸಂಪೂರ್ಣವಾಗಿ ಉಚಿತ ವಸತಿ ಶಿಕ್ಷಣಕ್ಕೆ ಪ್ರವೇಶವನ್ನು ಅರ್ಹವಾಗಿರುವದು
ಇಲ್ಲಿ ಮಗುವಿನಿಂದ ಯಾವುದೇ ರೀತಿಯಾಗಿರುವ ಬೋಧನಾ ಶುಲ್ಕ ಮತ್ತು ವಸತಿ ಶುಲ್ಕವನ್ನು ಪಡೆಯುವುದಿಲ್ಲ ಏಕೆಂದರೆ ಇದು ಪರಮಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಬಹುದಿನಗಳ ಕನಸು ಈ ಕನಸಿನಗೋಸ್ಕರ ಪರಮಪೂಜ್ಯ ಶ್ರೀಗಳವರು ಒಂದು ಬಹುದೊಡ್ಡದಾಗಿರುವಂತಹ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಅದೇನೆಂದರೆ ಶ್ರೀಮಠಕ್ಕೆ ಪರಮಪೂಜ್ಯ ಶ್ರೀ ಗಳವರ ಆಶೀರ್ವಾದವನ್ನು ಪಡೆಯಲು ಬರುವ ಸದ್ಭಕ್ತರು ನನಗಾಗಿ ಶಾಲು ಹಾರು ತುರಾಯಿಯನ್ನು ತರಬೇಡಿ ಇದರ ಬದಲಿಗೆ ಶಿವಯೋಗಿ ಜ್ಞಾನ ಮಂದಿರದ ಬಡವ ಮಕ್ಕಳಿಗಾಗಿ ಬೇಕಾಗಿರುವ ಅವಶ್ಯಕತೆ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ ತಂದು ಇದಕ್ಕಿಂತಲೂ ಬಹುದೊಡ್ಡದಾಗಿರುವಂತಹ ಸಂತೋಷದ ಗೌರವ ಸನ್ಮಾನ ನನಗೆ ಮತ್ತೊಂದು ಇಲ್ಲ ಎಂಬುದನ್ನ ಪರಮಪೂಜ್ಯ ಶ್ರೀಗಳವರು ತಿಳಿಸುವ ಮೂಲಕ ಶಿವಯೋಗಿ ಜ್ಞಾನ ಮಂದಿರದ ಬಡವ ಮಕ್ಕಳಿಗೆ ಅವರ ಶಿಕ್ಷಣಕ್ಕಾಗಿ ದಿನಂಪ್ರತಿ ಬಿಡವಿಲ್ಲದೆ ಪರಿಶ್ರಮಿಸುತ್ತಿದ್ದಾರೆ
ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುವ ಪರಮ ಪೂಜ್ಯ ಶ್ರೀಗಳವರು ಶಿವಯೋಗಿ ಜ್ಞಾನ ಮಂದಿರದ ಬಡವ ಮಕ್ಕಳ ಉಚಿತ ಶಿಕ್ಷಣದ ಹೈಟೆಕ್ ಮಾದರಿಯ ನೂತನ ವಸತಿ ನಿಲಯಗಳನ್ನು ನಿರ್ಮಾಣ ಮಾಡಿದ್ದು,
ಆ ವಸತಿ ನಿಲಯಗಳ ಲೋಕಾರ್ಪಣೆಯನ್ನು ದಿನಾಂಕ 18 -9 – 2024 ರಂದು ಮಧ್ಯಾಹ್ನ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು ಇದರ ಪ್ರಯುಕ್ತವಾಗಿ ಅದೇ ದಿನ ಪೂರ್ವದಲ್ಲಿ ಪೂಜ್ಯ ಶ್ರೀ ಗಳವರು ಮಕ್ಕಳ ಭವಿಷ್ಯ ಗೋಸ್ಕರ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಜಾಗ್ರತ ಗದುಗ್ಗೆ ಮಾರುದ್ರಾಭಿಷೇಕವನ್ನು ಸಮರ್ಪಣೆ ಮಾಡುವರು ತದನಂತರ ವೇದಿಕೆಯ ಮುಖಾಂತರ ನೂತನ ವಸತಿ ನಿಲಯಗಳ ಲೋಕಾರ್ಪಣೆ ನಡೆಯುವುದು ಕಾರ್ಯಕ್ರಮಕ್ಕೆ ಅನೇಕ ಜನ ನಾಡೀನ ಮಠಾಧೀಶರು ಶಿಕ್ಷಣ ಪ್ರೇಮಿಗಳು ರಾಜಕೀಯ ಧುರೀಣರು ಆಗಮಿಸುವರು ಎಂದು ಶ್ರೀಗಳು ತಿಳಿಸಿದ್ದಾರೆ.