ಚಿಣ್ಣರಿಂದ ಚಾಕೊಲೇಟ್ ದಿನ ಆಚರಣೆ
ವಿಜಯಪುರ,ಸೆ.14: ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ- ಶ್ರೀನಿಧಿ ಬಂಡೆ ಅವರು ಚಾಕೊಲೇಟ್ ಪ್ರದರ್ಶಿಸಿ ಚಾಕಲೇಟ್ ದಿನವನ್ನು ಶುಕ್ರವಾರ ಆಚರಿಸಿದರು.
ಚಾಕೊಲೇಟ್ ಪ್ರಿಯರನ್ನು ಉತ್ತೇಜಿಸುವ ಸಲುವಾಗಿ ವಿಶ್ವದಾದ್ಯಂತ ಸೆಪ್ಟೆಂಬರ್ 13ರಂದು ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕೊಲೇಟ್ ದಿನವು ಒಳ್ಳೆಯತನಕ್ಕೆ ಮೀಸಲಾಗಿರುವ ದಿನವಾಗಿದೆ. ಎಲ್ಲರೂ ಜೊತೆ ಬೆರೆಯಲು, ಪ್ರಶಂಸಿಸಿಕೊಳ್ಳಲು, ಪ್ರೀತಿಯನ್ನು ಹಂಚಲು ಈ ದಿನ ಮೀಸಲಾಗಿದೆ.
ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನೋ ಸಿಹಿ ಪದಾರ್ಥಗಳಲ್ಲಿ ಚಾಕೊಲೇಟ್ ಕೂಡ ಒಂದು. ಬಾಯಿಯನ್ನು ಸಿಹಿಯಾಗಿಸುವುದರೊಂದಿಗೆ ಮನವನ್ನು ತಣಿಸುತ್ತದೆ. ಹೀಗಾಗಿ ಈ ಚಾಕೊಲೇಟ್‍ಗೆ ಮನಸೋಲದವರಿಲ್ಲ. ಚಾಕೊಲೇಟ್ ಕಂಪನಿಯ ಸಂಸ್ಥಾಪಕ ಮಿಲ್ಟನ್ ಎಸ್ ಹೆರ್ಷೆ ಅವರ ಜನ್ಮದಿನವನ್ನು ಚಾಕಲೇಟ್ ದಿನವನ್ನಾಗಿ ಆಚರಿಸುತ್ತಾರೆ. ಇದು ವರ್ಗ, ವಯಸ್ಸು, ಲಿಂಗಗಳ ಗಡಿಗಳನ್ನು ಮೀರಿ ಆನಂದಿಸುವ ಬಹುಮುಖ್ಯವಾದ ಪದಾರ್ಥವಾಗಿದೆ.