ನಾವು ಭಾರತದಲ್ಲಿದ್ದೇವೆ ಹೊರತು, ಬಾಂಗ್ಲಾ ದೇಶದಲ್ಲಲ್ಲ: ಈಶ್ವರಸಿಂಗ್ ಠಾಕೂರ್
ಬೀದರ್: ಸೆ.14:ಗಣೇಶ ಕುಳ್ಳಿರಿಸುವುದು ಹಾಗೂ ವಿಸರ್ಜನೆ ಮಾಡುವುದು ವರ್ಷಕ್ಕೆ ಒಂದೇ ಬಾರಿ. ಇದು ಹಿಂದು ಧರ್ಮದ ದೊಡ್ಡ ಪರೆಂಪರೆ, 1980ರಿಂದ ಪ್ರತಿ ವರ್ಷ ಬೀದರ್‍ನಲ್ಲಿ ನಡೆದುಕೊಂಡು ಬರುತ್ತಿರುವ ಸತ್ ಸಂಪ್ರದಾಯ ಈ ಹಬ್ಬ. ಹೀಗಿರುವಾಗ ಬುಧವಾರ ಗಣೇಶ ವಿಸರ್ಜನೆ ವೇಳೆ ಪೋಲಿಸ್ ಇಲಾಖೆ ಡಿ.ಜಿ ಸೌಂಡ್ ಬಂದ್ ಮಾಡಿಸಿ ಲಕ್ಷಾಂತರ ಭಕ್ತರಿಗೆ ನೋವುಂಟು ಮಾಡಿರುವುದು ಗಣೇಶ ಮಹಾ ಮಂಡಳ ಇದನ್ನು ತಿವೃವಾಗಿ ಖಂಡಿಸುತ್ತದೆ ಎಂದು ಮಹಾ ಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಗಣೇಶ ವಿಸರ್ಜನೆ ಕಾನೂನು ಬೇರೆ ಹಬ್ಬಕ್ಕೆ ಹೋಲಿಸುವುದು ಒಳ್ಳೆಯದಲ್ಲ. ಬೆಳಿಗ್ಗೆ ವರೆಗೆ ಮೆರವಣಿಗೆ ಮಾಡುವ ಹಬ್ಬ ಗಣೇಶ ವಿಸರ್ಜನೆ ಒಂದೆ. ಈ ಹಿಂದೆ ಪೋಲಿಸ್ ಇಲಾಖೆ ಎಂದು ಸಹ ಈ ರೀತಿ ನಡೆದುಕೊಂಡಿರಲಿಲ್ಲ. ಕಳೆದ ವರ್ಷ ಸ್ವತಃ ಡಿಸಿ, ಎಸ್.ಪಿ ಎದುರು ನಿಂತು ಗಣೇಶ ಮಹಾ ಮಂಡಳಕ್ಕೆ ಸಂಪೂರ್ಣ ಸಹಕಾರ ನೀಡಿದ್ದರು. ಆದರೆ ಈ ವರ್ಷ ಯಾರಿಗೆ ಸಂತೋಷ ಪಡಿಸಲು ಡಿ.ಜೆ ಸೌಂಡ್ ಬಂದ್ ಮಾಡಿದ್ದಿರಿ? ಎಂಬುದು ಅರ್ಥವಾಗುತ್ತಿಲ್ಲ.
ಬೇರೆ ಧರ್ಮದ ಕಾರ್ಯಕ್ರಮಗಳೆ ಬೇರೆ, ಗಣೇಶ ವಿಸರ್ಜನೆ ಬೇರೆ. ಅದರಲ್ಲೂ ಪ್ರಮುಖವಾಗಿ ಮುಂಬೈ, ಪುಣೆ, ಹುಬ್ಬಳ್ಳಿ, ಹೈದ್ರಾಬಾದ್ ಇತ್ಯಾದಿ ಕಡೆಗಳಲ್ಲಿ ಗಣೇಶ ವಿಸರ್ಜನೆ ವೇಳೆ ಡಿ.ಜೆ ಸೌಂಡ್ ಬೆಳಿಗ್ಗೆ ವರೆಗೆ ಅನುಮತಿ ನೀಡಲಾಗಿರುತ್ತದೆ. ಆದರೆ ನಮ್ಮಲ್ಲಿ ತಡರಾತ್ರಿ ಡಿ.ಜೆ ಸೌಂಡ್ ಬಂದ್ ಮಾಡಿಸಿರುವ ಪೋಲಿಸ್ ಇಲಾಖೆ ನಡೆ ಅನುಮಾನಕ್ಕೆ ಕಾರಣವಾಗಿದೆ. ಇದು ಲಕ್ಷಾಂತರ ಗಣಪತಿ ಭಕ್ತರ ಮನಸ್ಸಿಗೆ ಘಾಸಿ ಮಂಡಿಸಿದೆ. ಎಂದರು.
ಮಹಾ ಮಂಡಳದ ಇನ್ನೋರ್ವ ಮುಖಂಡರು ಹಾಗೂ ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿಗಳಾದ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಭಾರತವು ಈ ಜಗತ್ತಿನಲ್ಲಿ ಇರುವ ಕೇವಲ ಎಕೈಕ ಸನಾತನ ಸಂಪ್ರದಾಯ ಇರುವ ದೇಶ. ಕೇವಲ ಹಿಂದುಗಳು ವಾಸಿಸುವ ಭೂಮಿ ಇರೊದು ಈ ಭೂಮಿ ಮೇಲೆ ಭಾರತ ಮಾತ್ರ. ಅಂಥದರಲ್ಲಿ ಭಾರತಿಯರಿಗೆ ಅವರದೆ ಹಬ್ಬ ಆಚರಿಸುವ ಸ್ವಾತಂತ್ರ ಇಲ್ಲ ಅಂದರೆ ಇಲ್ಲಿ ಪ್ರಜಾಪ್ರಭುತ್ವ ಜೀವಂತ ಇದೆಯಾ? ಎಂಬ ಪ್ರಶ್ನೆ ಮೂಡುತ್ತದೆ. ನಾವು ಭಾರತೀಯರು, ಹಿಂದುಗಳು. ನಮ್ಮ ಹಬ್ಬ ಆಚರಿಸುವುದು ನಮ್ಮ ನೆಲದಲ್ಲಿ ಬಾಂಗ್ಲಾ ದೇಶದಲ್ಲಿ ಆಚರಿಸುತ್ತಿಲ್ಲ.
ಇದು ಲಕ್ಷಾಂತರ ಹಿಂದುಗಳ ಭಾವನೆಗೆ ಧಕ್ಕೆ ತರುವಂಥ ನಡೆ. ಗಣೇಶ ಮಹಾ ಮಂಡಳಿಗೆ ಯಾವತ್ತೂ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಸಹಕಾರ ನೀಡಬೇಕು. ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ಸರಿಯಿಲ್ಲ. ಎಸ್.ಪಿ ಹೊಸಬರಿರಬಹುದು. ಆದರೆ ಹೆಚ್ಚುವರಿ ಎಸ್.ಪಿ, ಡಿ.ಎಸ್.ಪಿ ಸೇರಿದಂತೆ ಇತರೆ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಇಲ್ಲಿನ ಎಲ್ಲ ಸಂಪ್ರದಾಯ ಗೊತ್ತಿದೆ. ಹೀಗಿರುವಾಗ ತಡರಾತ್ರಿ ಡಿ.ಜೆ ಬಂದ್ ಮಾಡಿಸಿರುವ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಸ್ವತಂತ್ರಕ್ಕಿಂತ ಪೂರ್ವದಲ್ಲಿ ಬಾಲ ಗಂಗಾಧರ ತಿಲಕ ಅವರು ಗಣೇಶ ಚತುರ್ಥಿ ಹುಟ್ಟು ಹಾಕಿರುವ ವರ್ಷವೇ ಬೀದರ್‍ನಲ್ಲಿ ಸಹ ಗಣೇಶ ಚತುರ್ಥಿ ಶುರುವಾಗಿದೆ. ಅಲ್ಲಿಂದ ಇಲ್ಲಿ ವರೆಗೆ ಬೀದರ್‍ನಲ್ಲಿ ಈ ಸತ್ ಸಂಪ್ರದಾಯ ಇರುವಾಗ ಇದೇ ವರ್ಷ ಡಿ.ಜೆ ಸೌಂಡ್ ಬಂದ್ ಮಾಡಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಮಂಡಳದ ಮತ್ತೋರ್ವ ಮುಖಂಡರಾದ ಸೋಮಶೇಖರ ಪಾಟೀಲ ಗಾದಗಿ, ಸುರ್ಯಕಾಂತ ಶಟಕಾರ, ಚಂದ್ರಶೇಖರ ಗಾದಾ ಪತ್ರಿಕಾಗೋಷ್ಟಿಯಲ್ಲಿದ್ದರು.