ಡಾ.ಅಂಬೇಡ್ಕರ್ ಶಾಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ವಾಡಿ:ಸೆ.14: ಪಟ್ಟಣದ ನ್ಯೂಟೌನ್ ಪ್ರದೇಶದಲ್ಲಿ ನಡೆದ ನಾಲವಾರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕೀರ್ತಿ ಹೆಚಿಸಿದ್ದಾರೆ.
ಪ್ರೌಢಶಾಲಾ ವಿಭಾಗದ ಬಾಲಕರ ವಾಲಿಬಾಲ್ ಪ್ರಥಮ ಸ್ಥಾನ, ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ಖೋ ಖೋ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋ ಖೋ ದ್ವಿತೀಯ ಸ್ಥಾನ, ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನ, ಪ್ರೌಢಶಾಲಾ ಬಾಲಕಿಯರ ರಿಲೇ ಓಟದಲ್ಲಿ 4100ದ್ವಿತೀಯ ಸ್ಥಾನ, ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ರಿಲೇ 4100 ದ್ವಿತೀಯ ಸ್ಥಾನ, ಪ್ರೌಢಶಾಲಾ ಬಾಲಕರ ಅಥ್ಲೆಟಿಕ್ಸ್ 100ಮೀ. ರನ್ನಿಂಗ್ ದತ್ತು ದ್ವಿತೀಯ ಸ್ಥಾನ, 200ಮೀ. ರನ್ನಿಂಗ್ ಪ್ರತೀಕ್ ದ್ವಿತೀಯ ಸ್ಥಾನ, 400 ಮೀಟರ್ ರನ್ನಿಂಗ್ ಅವಿನಾಶ್ ಪ್ರಥಮ ಸ್ಥಾನ, 800 ಮೀಟರ್ ಓಟದಲ್ಲಿ ಶಿವು ಪ್ರಥಮ ಸ್ಥಾನ, ಚಕ್ರ ಎಸೆತ ಸ್ಪರ್ಧೆಯಲ್ಲಿ ವಿಶಾಲ್ ಪ್ರಥಮ ಸ್ಥಾನ, ತ್ರಿವಿಧ ಜಿಗಿತ ದತ್ತು ದ್ವಿತೀಯ ಸ್ಥಾನ, ಉದ್ದ ಜಿಗಿತ ಜೀವನ್ ತೃತೀಯ ಸ್ಥಾನ, ಬಾಲಕಿರ ಅಥ್ಲೆಟಿಕ್ಸ್ ಪ್ರೌಢಶಾಲಾ ವಿಭಾಗ 400 ಮೀಟರ್ ಓಟ ಆದಿತ್ಯ ಪ್ರಥಮ ಸ್ಥಾನ, 800 ಮೀಟರ್ ಓಟ ಪಾಯಲ್ ಪ್ರಥಮ ಸ್ಥಾನ, ಉದ್ದ ಜಿಗಿತ ಸಂಜನಾ ಪ್ರಥಮ ಸ್ಥಾನ, ಪ್ರಾಥಮಿಕ ಶಾಲೆ ವಿಭಾಗದ ಬಾಲಕರ ಅಥ್ಲೆಟಿಕ್ಸ್ 100 ಮೀಟರ್ ಓಟ ಗಣೇಶ್ ಪ್ರಥಮ ಸ್ಥಾನ, ಉದ್ದ ಜಿಗಿತ ಗಣೇಶ್ ದ್ವಿತೀಯ ಸ್ಥಾನ, ಪ್ರಾಥಮಿಕ ಬಾಲಕಿಯರ ಅಥ್ಲೆಟಿಕ್ಸ್ 100 ಮೀಟರ್ ಓಟ ಕಸ್ತೂರಿ ಪ್ರಥಮ ಸ್ಥಾನ, 200 ಮೀಟರ್ ಓಟ ಕಸ್ತೂರಿ ಪ್ರಥಮ ಸ್ಥಾನ, ಉದ್ದ ಜಿಗಿತ ಕಸ್ತೂರಿ ಪ್ರಥಮ ಸ್ಥಾನ ಪಡೆಯುವ ಮೂಲಕ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವಸತಿ ಶಾಲೆಯ ಪರಶುಪಾಲ ಉದಯ ಧರೇಣ್ಣನವರ್, ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದರು.