ಛಾಯಾಗ್ರಾಹಕ ಅಂಬಿಗೇರರ ಶಿಕ್ಷಣ ಪ್ರೇಮ
ಕೊಲ್ಹಾರ: ಸೆ.14:ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 8 ನೇ ವರ್ಗದ ಮಕ್ಕಳ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಗುವಿಗೆ ಬಹುಮಾನ ವಿತರಣೆ ಮಾಡಲು ಸರಕಾರಿ ಪ್ರೌಢಶಾಲೆ ಕುಪಕಡ್ಡಿಯ ನೂತನ Sಆಒಅ ಸದಸ್ಯರಾದ ಶ್ರೀ ಚಂದ್ರಶೇಖರ ಅಂಬಿಗೇರ ( ಪೆÇಟೊಗ್ರಾಫರ) ರವರು ?21000 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ. ಸದರಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಅದರ ಬಡ್ಡಿ ಹಣದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿವರ್ಷ ಬಹುಮಾನ ವಿತರಿಸಲಾಗುವುದು. ಗ್ರಾಮದಲ್ಲಿ ಛಾಯಾಗ್ರಾಹಕರಾಗಿ ಪುಟ್ಟ ಉದ್ಯೋಗ ಮಾಡುತ್ತಿದ್ದರೂ ಅವರ ಶಿಕ್ಷಣ ಪ್ರೇಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ ಅವರಿಗೆ ಗುರನಗೌಡ ಬಿರಾದಾರ, ಉದಯಕುಮಾರ ಹಳ್ಳಿ, ಮುರುಗೇಶ ಹಳ್ಳಿ, ಸಿದ್ದನಗೌಡ ಪಾಟೀಲ, ಸತ್ಯಪ್ಪ ಮದಗುಣಕಿ, ಮಹಾಂತಪ್ಪ ಇಂಡಿ, ಭೀಮಸಿ ಪಾಯಗೊಂಡ ಸೇರಿದಂತೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.