ಬಸ್ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ
ನವಲಗುಂದ,ಸೆ14: ತಾಲ್ಲೂಕಿನ ಕಾಲವಾಡ ಗ್ರಾಮದ ಕ್ರಾಸ್‍ನಲ್ಲಿ ಬಸ್ ನಿಲುಗಡೆಗಾಗಿ ಆಗ್ರಹಿಸಿ ಕಾಲವಾಡ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಟ್ರಾಕ್ಟರ್ ಮೂಲಕ ನವಲಗುಂದಕ್ಕೆ ಆಗಮಿಸಿ ತಹಶೀಲ್ದಾರ ಕಾರ್ಯಾಲಯದ ಎದುರಿಗೆ ಕೆಲ ಕಾಲ ಪ್ರತಿಭಟಸಿದರು.
ತಾಲೂಕಾ ಕೇಂದ್ರದಿಂದ 12ಕೀಮಿ ದೂರದಲ್ಲಿರುವ ಕಾಲವಾಡ ಗ್ರಾಮದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ,ಕಾಲೇಜುಗಳಿಗೆ ತೆರಳಲು ಅನುಕೂಲವಾಗುವಂತೆ ಗ್ರಾಮದಿಂದ 2 ಕೀಮಿ ದೂರದಲ್ಲಿರುವ ಕಾಲವಾಡ ಕ್ರಾಸ್‍ನಲ್ಲಿ ಬಸ್ ನಿಲುಗಡೆ ಮಾಡದಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೂ ತೊಂದರೆಯಾಗುತ್ತಿದೆ
ಶಾಲಾ ಸಮಯಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ಕ್ರಾಸ್‍ನಲ್ಲಿ ಬಸ್ ನಿಲುಗಡೆ ಮಾಡುವಂತೆ ಆಗ್ರಹಿಸಿ ಈ ಮೊದಲು ನವಲಗುಂದ ಸಾರಿಗೆ ಡಿಪೊ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಯಾವುದೆ ಕ್ರಮ ಜರುಗದ ಹಿನ್ನೆಲೆಯಲ್ಲಿ ಬೇಸತ್ತು ಪ್ರತಿಭಟನೆಗಿಳಿಯಲಾಗಿದೆ ಎಂದು ಅಳಲು ತೋಡಿಕೊಂಡರು.
ಇನ್ನೂ ಮುಂದೆಯಾದರು ವಿದ್ಯಾರ್ಥಿಗಳ ಅನುಕೂಲಕ್ಕಾದರೂ ಕಾಲವಾಡ ಕ್ರಾಸ್‍ನಲ್ಲಿ ಬಸ್ ನಿಲುಗಡೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ನಂತರ ತಹಶೀಲ್ದಾರ ಇಲಾಖೆಯ ಶಿರೇಸ್ತಾದರ ಕೃಷ್ಣ ಅರೇರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ರೇಖಾ ದಳವಾಯಿ, ಸಂಗೀತಾ ನಾಗರಳ್ಳಿ, ಕೆ,ಜಿ.ಧಾರವಾಡ, ಗುರಪ್ಪ ಬೆಣ್ಣಿ,ಎಚ್,ಎನ್,ಲಿಂಗರಡ್ಡಿ,ಪಾಂಡುರಡ್ಡಿ ಬಾಡಗಿ, ಕುಮಾರ ಬ್ಯಾಹೆಟ್ಟಿ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.