ಸೆ.15 ರಂದು ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಬೈಲಹೊಂಗಲ, ಸೆ 14: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆ. 15 ರಂದು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಗ್ರೇಡ್ 2 ತಹಸಿಲ್ದಾರ್ ಬೀಜಿ ಕುಲಕರ್ಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ಆದೇಶದ ಅನ್ವಯ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಿಸಲಾಗುತ್ತಿದೆ.
ತಾಲೂಕಿನ ಗಡಿ ಪ್ರಾರಂಭವಾಗುವ ಬೆಳಗಾವಿ ಬಾಗಲಕೋಟೆ ಹೆದ್ದಾರಿಯ ಇಂಚಲ ಗ್ರಾಮದ ಮಹಾದ್ವಾರದಿಂದ ಗಡಿ ಮುಕ್ತಾಯ ವಾಗುವ ಕರಡಿಗುದ್ದಿ ಗ್ರಾಮದ ವರೆಗೆ ಪ್ರತಿ ಕಿ. ಮೀ.ಗೆ 1000 ಜನರಂತೆ ಸುಮಾರು 15 ಸಾವಿರ ಜನರನ್ನು ಒಳಗೊಂಡು ಮಾನವ ಸರಪಳಿ ನಿರ್ಮಿಸಿ ಅಂತರರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದ್ದೂ,ವಿದ್ಯಾರ್ಥಿ/ನಿಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಶಿರಸ್ತೆದಾರ, ಜೆ. ವಿ. ನಿಡೋಣಿ, ವಿಷಯ ನಿರ್ವಾಹಕಿ, ಲಕ್ಷ್ಮೀ ಕೂಗನ್ನವರ ಉಪಸ್ಥಿತರಿದ್ದರು.