ಗಣೇಶ ವಿಸರ್ಜನಾ ಕಾರ್ಯಕ್ರಮ
ಲಕ್ಷ್ಮೇಶ್ವರ, ಸೆ14: ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ವಿಸರ್ಜನಾ ಕಾರ್ಯಕ್ರಮ ಏಳನೆಯ ದಿನವಾದ ಶುಕ್ರವಾರ ಅತ್ಯಂತ ಸಾಂಪ್ರದಾಯಕವಾದ ಪದ್ಧತಿಯಲ್ಲಿ ಜರಗಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಪಿಎಸ್‍ಐ ಈರಣ್ಣ ರಿತ್ತಿ ಅವರು ಎಸ್ ಎಸ್ ಕೆ ಸಮಾಜದ ಈ ಗಣೇಶೋತ್ಸವ ಕಾರ್ಯಕ್ರಮ ಎಲ್ಲರಿಗೂ ಅನುಕರಣೆಯ ಮತ್ತು ಮಾದರಿಯವಾಗಿದೆ ಎಂದು ಹೇಳಿದರಲ್ಲದೆ ಯಾವ ದೇವರನ್ನು ನಾವು ಪೂಜಿಸಲು ಪ್ರತಿಷ್ಠಾಪಿಸಿರುತ್ತೇವೆಯೋ ಅದೇ ದೇವರ ಕಾರ್ಯಕ್ರಮಕ್ಕೆ ದೇವರ ಸ್ತುತಿಸುವ ಭಜನೆ ಕೀರ್ತನೆ ಸಾಂಪ್ರದಾಯಕ ವ್ಯವಸ್ಥೆಯೊಂದಿಗೆ ಮಾಡಿದರೆ ಅದಕ್ಕೆ ಹೆಚ್ಚು ಮಹತ್ವ ಬರುತ್ತದೆ ಎಂದರು.
ಮೆರವಣಿಗೆಯು ಅಂಬಾ ಭವಾನಿ ದೇವಸ್ಥಾನದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶಿಗ್ಲಿ ನಾಕಾದಲ್ಲಿ ಪುರಸಭೆ ನಿರ್ಮಿಸಿದ ಕೃತಕ ಹೊಂಡದಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಮಹಿಳಾ ಮಂಡಲ ಯುವಕ ಮಂಡಲ ಸದಸ್ಯರುಗಳು ಸಮಾಜದ ಮುಖಂಡರು ಇದ್ದರು.
ಮೆರವಣಿಗೆಯಲ್ಲಿ ಎನ್ ಆರ್ ಪವಾರ, ರಂಗನಾಥ ಬದ್ದಿ, ಪರುಶುರಾಮ ಮೆಹರವಾಡೆ, ಮಹದೇವಸಾ ಬಸವಾ, ಪಾಂಡುಸಾ ಬದ್ದಿ, ರಾಮಣ್ಣ ಬದ್ದಿ, ವಿ ಎಸ್ ಸಿದ್ಲಿಂಗ, ಮಂಜುನಾಥ್ ಬದ್ದಿ, ಗಣೇಶ್ ಮೆಹರ್ವಾಡೆ, ವೆಂಕಟೇಶ ಮಾತಾಡಿ, ಶಾಂತಿಭಾಯಿ ಪವಾರ, ನಂದಾಬಾಯಿ ಮೆಹರ್ವಾಡೆ, ರೂಪಾ ರಾ ಜೋಳಿ, ಅಕ್ಷತಾ ಬಸವಾ ಸೇರಿದಂತೆ ಅನೇಕರಿದ್ದರು.