ಬಳ್ಳಾರಿ ಜೈಲಿನಲ್ಲಿ ದರ್ಶನ್ ಗೆ ನಿಜವಾದಸೆರೆವಾಸದ ಅನುಭವ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.14:  ಇಲ್ಕಿನ ಜೈಲಿನಲ್ಲಿ ಕಳೆದ ಎರೆಡು ವಾರಗಳಿಂದ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಗೆ ಇಲ್ಲಿ ಯಾರ ಸಹಕಾರ ಇಲ್ಲದೆ.  ಸೆಲ್ ನಲ್ಲಿ ಕಸ ಬಳಿಯುವುದು, ಬಟ್ಟೆ ತೊಳೆದುಕೊಳ್ಳುವುದು, ಶೌಚಾಲಯ ಕ್ಲೀನಿಂಗ್ ಮೊದಲಾದುವನ್ನು ಮಾಡಿಕೊಳ್ಳುತ್ತ ನಿಜವಾದ ಸೆರೆವಾಸ ಅನುಭವಿಸುವಂತಾಗಿದೆ.
ಈ‌ ಹಿಂದೆ ಬೆಂಗಳೂರಿನ  ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಇವರು ಸೆಲಬ್ರೆಟಿ ಎಂದು ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಿಂದ ಎಲ್ಲ ಸವಲತ್ತುಗಳ ಮೂಲಕ ಜಮ್ ಎನ್ನುವ ಹಾಗಿ‌ ಇದ್ದರಂತೆ.
ಆದರೆ ಇಗ ಇಲ್ಲಿ ಕನಿಷ್ಟ ಕಾಲ‌ ಕಳೆಯಲು ಟಿವಿ ಸೌಲಭ್ಯವೂ ಇಲ್ಲದಂತಾಗಿದೆ.
ತನ್ನ ಬಟ್ಟೆಗಳನ್ನು  ತಾನೆ ತೊಳೆದುಕೊಳ್ಳುತ್ತಿದ್ದು. ಕೆಲ ಬಟ್ಟೆಗಳನ್ನು ಮಾತ್ರ ಪತ್ನಿ ಬಂದಾಗ ಬದಲಾಯಿಸುತ್ತಾರಂತೆ. ತಾನಿರುವ ಸೆಲ್‌ನ್ನು ನಿತ್ಯ ಪೊರಕೆ ಹಿಡಿದು ಕ್ಲೀನ್ ಮಾಡಿಕೊಳ್ತಾರೆ.
ಜೈಲಿನ ನಿಯಮಗಳ ಪ್ರಕಾರ ಶೌಚಾಲಯವನ್ನು ವಾರಕ್ಕೊಮ್ಮೆ  ಸಿಬ್ಬಂದಿ ಬಂದು ಕ್ಲೀನ್ ಮಾಡ್ತಾರೆ.  ಉಳಿದ ದಿನ ಅವರೇ ಕ್ಲೀನ್ ಮಾಡಿಕೊಳ್ಳಬೇಕು
ಸ್ಟಾರ್ ಆಗಿ ಒಳ್ಳೆ ಕೆಲ್ಸಾ ಮಾಡಿದ್ದಿದ್ರೇ ಆರಾಮಾಗಿ ಇರಬಹುದಿತ್ತು. ಆದರೆ ಕೊಲೆ ಆರೋಪ ಹೊತ್ತು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಪ್ಟ್ ಆಗಿರುವ ದರ್ಶನ್. ಕಳೆದ
16 ದಿನಗಳಿಂದ ಈ ಸಂಕಷ್ಟ ಎದುರಿಸಬೇಕಾಗಿದೆ.
ಟಿವಿ ಕೊಡಿ….
ಜೈಲಲ್ಲಿ ದರ್ಶನ್ ಪದೇ ಪದೇ  ಟಿವಿಗಾಗಿ  ಬೇಡಿಕೆ ಇಡ್ತಿರೋ ಹಿನ್ನಲೆ ಬೇಸತ್ತ ಬಳ್ಳಾರಿ ಸೆಂಟ್ರಲ್ ಜೈಲು ಸಿಬ್ಬಂದಿ. ಜೈಲಿನಲ್ಲಿ ಇರೊಷ್ಟು ದಿನ ಜೈಲು ನಿಯಮ ಫಾಲೋ ಮಾಡಿ.‌ನ್ಯಾಯಾಲಯ ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗತ್ತದೆ ಎಂದು  ಜೈಲಿಗೆ ಕಳಿಸುತ್ತದೆ ಆದರೆ  ಎಲ್ಲೋ ಒಂದು ಕಡೆ ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡ್ತಿದ್ದೀರಾ ಅನಿಸುತ್ತದೆ.
ಪದೇ ಪದೇ ಸೌಲಭ್ಯಗಳಿಗಾಗಿ ಕೇಳ್ತಿರೋದು ಸರಿಯಲ್ಲ. ನಾವು ಕಾನುನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡ್ತೇವೆ. ಹೆಚ್ಚಿನದ್ದು ಬೇಕು ಅಂದ್ರೇ ಕೋರ್ಟ್ ಗೆ ಅರ್ಜಿ ಹಾಕಿ ಎಂದು ಜೈಲರ್ ಮೂಲಕ ಹಿರಿಯ ಅಧಿಕಾರಿಗಳುದರ್ಶನ್ ಗೆ ಎಚ್ಚರಿಕೆ ನೀಡಿದ್ದಾರಂತೆ.