ಆಟ, ಪಾಠಗಳೊಂದಿಗೆ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ :ಡಿವೈಎಸ್‍ಪಿ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.14: ಇಂದಿನ ವಿದ್ಯಾರ್ಥಿಗಳು ಕೇವಲ ಪಾಠಗಳಿಗೆ ಸೀಮಿತರಾಗದೆ,ಆಟಕ್ಕೂ ಹೆಚ್ಚಿನಆದ್ಯತೆ ನೀಡಿ, ಆಟ, ಪಾಠಗಳ ನಡುವೆ ನಿಮ್ಮಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದುಡಿವೈಎಸ್‍ಪಿ ವೆಂಕಟಪ್ಪನಾಯ್ಕ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಪ್ರಕೃತಿ ವಿದ್ಯಾಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿಜೋನಲ್ ಮಟ್ಟದಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಓಟ, ಹೈಜಂಪು, ಲಾಂಗ್‍ಜಂಪ ಸೇರಿದಂತೆಅಥ್ಲೆಟಿಕ್ ಆಟಗಳು ದೈಹಿಕಚಟುವಟಿಕೆನ್ನು ಸಕ್ರಿಯಗೊಳಿಸಿದರೆ, ಚೆಸ್(ಚದುರಂಗ) ಆಟ ಮಾನಸಿಕವಾಗಿ ಮತ್ತು ಮೆದುಳಿನ ಬುದ್ದಿವಂತಿಕೆಯ ಮಟ್ಟವನ್ನು ಹೆಚ್ಚಿಸುತ್ತದೆಎಂದಅವರುಆಟದಲ್ಲಿ ಗೆಲುವು, ಸೋಲು ಸಹಜ, ಸ್ಪರ್ಧಾತ್ಮಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಸೋತವರು ಮರಳಿ ಪ್ರಯತ್ನ ಮಾಡಿದಲ್ಲಿ ಗೆಲುವು ಹಾಗೂ ಯಶಸ್ಸು ಸಿಗುತ್ತದೆ ಎಂದರು.
ಚೆಸ್‍ಆಟದಲ್ಲಿ ವಿವಿಧರಾಜ್ಯದ ವಿದ್ಯಾರ್ಥಿಗಳು ಪ್ರತಿನಿಧಿಸುತ್ತಿರುವುದುತಾಲೂಕಿನ ಹೆಮ್ಮೆಯ ಸಂಗತಿಯಾಗಿದ್ದು, ಎಲ್ಲರೂದ್ವೇಷ, ಅಸೂಯೆಗಳನ್ನು ಮರೆತು ಸ್ಪರ್ಧಾತ್ಮಕ ಭಾವನೆಯನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಪೋಲಿಸರು ಸಕ್ರಿಯವಾಗಿ, ಸಾರ್ವಜನಿಕ ಸ್ನೇಹಿಯಾಗಿಉತ್ತಮವಾದಕೆಲಸವನ್ನು ಮಾಡುತ್ತಿರುವುದರಿಂದಇತ್ತೀಚಿನ ದಿನಗಳಲ್ಲಿ ಭಯದ ವಾತವರಣಕಡಿಮೆಗೊಳಿಸಿದ್ದಾರೆ ಎಂದಅವರುಶಿಕ್ಷಣಕ್ಕೆ ಬಡವ, ಶ್ರೀಮಂತ ಎನ್ನುವ ಬೇದಬಾವನೆಇರುವುದಿಲ್ಲ, ಇದಕ್ಕೆ ಶ್ರಮಯಾರು ಹಾಕುತ್ತಾರೆಅವರುಉತ್ತಮ ಭವಿಷ್ಯವನ್ನು ಹೊಂದುತ್ತಾರೆ.ಶಿಸ್ತು ಎಲ್ಲಿರುತ್ತದೆ, ಅಲ್ಲಿಉತ್ತಮ ಶಿಕ್ಷಣ ಹೆಚ್ಚಿರುತ್ತದೆ. ಆಸೆಯೊಂದಿಗೆಗುರಿಯನ್ನು ಹೊಂದಿ ಯಶಸ್ಸುಕಾಣಲುತಾವು ಪ್ರಯತ್ನಿಸಿ ಎಂದಅವರುಯಾರು ಸಹ ಸಣ್ಣ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡಬೇಡಿ, ಮಾಡದಂತೆ ಪೋಷಕರುತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸವನ್ನುಕೊಡಿಸುವ ಮೂಲಕ ಅವರನ್ನು ವಿದ್ಯಾವಂತರನ್ನಾಗಿಸಿ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಸ್ಥೆಯ ಮಾಜಿಅಧ್ಯಕ್ಷ ಶಶಿಧರ ಪೂಜಾರ ಮಾತನಾಡಿಚದುರಂಗ(ಚೆಸ್) ಆಟ ಮಹಾಭಾರತ ಕಾಲದಿಂದಲೂ ಪ್ರಸಿದ್ಧಿಯನ್ನು ಪಡೆದಿದೆ, ಈ ಆಟ ಬರೀಅದೃಷ್ಠದಆಟವಲ್ಲ, ಉತ್ತಮಯೋಚನೆ, ಯೋಜನೆಯನ್ನು ಬಲಿಷ್ಠಗೊಳಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕಗುಣಮಟ್ಟ ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಆಟ ಇದಾಗಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಎಂದಅವರುದಕ್ಷಿಣ ವಲಯ ಮಟ್ಟದಆಟವು ನಮ್ಮ ವಿದ್ಯಾಸಂಸ್ಥೆಯಿಂದ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.
ಸಂಸ್ಥೆಯಅಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿಜೋನಲ್ ಮಟ್ಟದಆಟವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಿದ್ದು, ಚೆಸ್‍ಆಟದಲ್ಲಿ ಏಕ ಕಾಲಕ್ಕೆ 1200ವಿದ್ಯಾರ್ಥಿಗಳು ಆಡಲಿದ್ದಾರೆ.ಅವರಿಗೆಎಲ್ಲಾರೀತಿಯ ವ್ಯವಸ್ಥೆಯನ್ನುಕಲ್ಪಿಸಲಾಗಿದೆಎಂದರು.
ಬಿಆರ್‍ಸಿ ಹೊನ್ನತ್ತೆಪ್ಪ, ಸಂಸ್ಥೆಯಉಪಾದ್ಯಕ್ಷಕೆ.ವೀರುಪಾಕ್ಷಪ್ಪ, ಮಹಾಂತೇಶ್ ಚಳ್ಳಿಗೇರಿ, ಬಸವರಾಜಉಲ್ಲತ್ತಿ, ಸುಮಾಉಪ್ಪಿನ, ನಾಗೇಶ ಉಪ್ಪಿನ, ಸೇರಿದಂತೆ ಶಿಕ್ಷಕರು, ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿ, ಪೋಷಕರು, ಇತರರುಇದ್ದರು.