ಜಿಂದಾಲ್‍ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಸಂಜೆವಾಣಿ ವಾರ್ತೆ
ವಿಜಯನಗರ, ಸೆ.14: ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್ ಕಂಪೆನಿಯ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಿಂದ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ವೈದ್ಯರಾದ ಡಾ. ತಿಪ್ಪೆಸ್ವಾಮಿ ಗೌಡ, ಡಾ. ತುಷಾರ ನಾಯ್ಕ, ಡಾ. ರೇಷ್ಮಾ ಮತ್ತು ಡಾ.ಸೌಮ್ಯ ಶ್ರೀ ಅವರು ನೂರಾರು ಜನರಿಗೆ ಆರೋಗ್ಯ ತಪಾಸಣೆ ನಡೆಸಿದರು. ಅಗತ್ಯವಿದ್ದವರಿಗೆ ಸೂಕ್ತ ಔಷಧೊಪಚಾರ ನೀಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವುಳ್ಳವರಿಗೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಯಿತು.
ಈ ಸಂದರ್ಭದಲ್ಲಿ ಡಾಣಾಪುರ ಗ್ರಾ.ಪಂ. ಪಿಡಿಒ ಎನ್.ಮಂಜುನಾಥ, ಅಧ್ಯಕ್ಷ ಎಚ್.ಮಲ್ಲೇಶ್, ಉಪಾಧ್ಯಕ್ಷೆ ಪದ್ಮಾವತಿ ನಾಗರಾಜ್, ಸದಸ್ಯರಾದ ರವಿರಾಜ್, ಶ್ವೇತಾ, ನಾಗರತ್ನಮ್ಮ, ಚೌಡಗಿ ನಾಗರಾಜ, ಪಕೀರಪ್ಪ, ದಾಕ್ಷಾಯಿಣಿ ಮಂಜುನಾಥ, ಯಶೋಧ ಶ್ರೀಧರ, ಗುಂಡಾ ಗ್ರಾಮದ ಸದಸ್ಯ ಕೃಷ್ಣ ಪಾಲ್ಗೊಂಡಿದ್ದರು.