ವುಂಕಿ ಸಣ್ಣರುದ್ರಪ್ಪ ಕಾನೂನುಮಹಾ ವಿದ್ಯಾಲಯದಲ್ಲಿ  ದಾನಿಗಳ ದಿನಾಚರಣೆ ಸ್ಮರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.14: ನಗರದ ವೀ.ವಿ. ಸಂಘದ ವುಂಕಿ ಸಣ್ಣರುದ್ರಪ್ಪ ಕಾನೂನುಮಹಾವಿದ್ಯಾಲಯದಲ್ಲಿ ಇಂದು ದಾನಿಗಳ ದಿನಾಚರಣೆ ನಡೆಯಿತು.
ವೀ.ವಿ. ಸಂಘದ ಅಧ್ಯಕ್ಷ  ಅಲ್ಲಂ ಗುರುಬಸವರಾಜ್, ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಕಾಲೇಜಿನ ಆಡಳಿತ ಮಂಡಳಿ  ಅಧ್ಯಕ್ಷ ಟಿ. ನರೇಂದ್ರಬಾಬು ಮಿಂಚೇರಿ ಹಾಗು ಸಿಬ್ಬಂದಿ  ವರ್ಗದವರು ಪಾಲ್ಗೊಂಡು ದಾನಿಗಳು ಕೊಡುಗೆಯನ್ನು ಸ್ಮರಿಸಿದರು.
ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಬಯಸಿ ಶ್ರಮ,ತ್ಯಾಗ ಮತ್ತು ದಾನ ನೀಡುವುದರ ಮೂಲಕ ಅವಿರತಶ್ರಮದಿಂದ 108 ವರ್ಷಗಳ ಇತಿಹಾಸ ಹೊಂದಿರುವ ಪ್ರತಿಷ್ಟಿತ ವೀ.ವಿ. ಸಂಘವನ್ನು ಕಟ್ಟಿ  ಬೆಳೆಸಿದ ದಾನ ಶ್ರೇಷ್ಠರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು