ಹಿಂದೂ ಮಹಾಗಣಪತಿ ಶೋಭಾ ಯಾತ್ರೆ ಶಾಸಕ ನಾರಾ ಭರತ್ ರೆಡ್ಡಿ ಭಾಗಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.14: ಕಳೆದ ಹಲವು ವರ್ಷಗಳಿಂದ ನಗರದ ಸೆಂಟೆನರಿ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪಿಸುತ್ತಿರುವ ಹಿಂದೂ ಮಹಾ ಗಣಪತಿಯ ಶೋಭಾ ಯಾತ್ರೆ ನಿನ್ನೆ ಸಂಜೆ ನಡೆಯಿತು.
ನಗರ ಶಾಸಕ ನಾರಾ ಭರತ್ ರೆಡ್ದಿ ಈ ಶೋಭಾ ಯಾತ್ರೆ ಆರಂಭಕ್ಕೂ ಮುನ್ನ ತೆರಳಿ  ಗಣಪತಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದು ತಮ್ಮ ಬೆಂಬಲಿಗರೊಂದಿಗೆ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ಭಕ್ತರು, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಿಗಾಗಿ  ಕುಡಿಯುವ  ನೀರಿನ ವ್ಯವಸ್ಥೆ ಮಾಡಿದ್ದರು.
ಪಾಲಿಕೆಯ ಸದಸ್ಯರಾದ  ನೂರ್ ಮಹಮ್ಮದ್, ಮಿಂಚು ಶ್ರೀನಿವಾಸ್, ಶಬರಿ ರವಿ ಮೊದಲಾದವರು ಇದ್ದರು.