ನಾಗರಾಳೆ ಪಬ್ಲಿಕ್ ಶಾಲೆಯ ಗಣೇಶ ವಿಸರ್ಜನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೪: ನಗರದ ಗಚ್ಚಿನಕಟ್ಟಿ ಕಾಲನಿಯ ನಾಗರಾಳೆ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಏಳು ದಿನಗಳ ಕಾಲ ವಿಘ್ನನಿವಾರಕ ಗಣೇಶೋತ್ಸವವನ್ನು ವಿಜೃಂಭಣೆಯಿAದ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಆಚರಣೆ ಮಾಡಿ, ವಿಸರ್ಜಿಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರುಮಾತೆ ತನುಜಾ ನಾಗರಾಳೆ ಮಾತನಾಡಿ, ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶ ಚತುರ್ಥಿ. ಗಣೇಶನಿಗೆ ಅಲಂಕಾರ ಮಾಡಿ ನಮ್ಮೆಲ್ಲರ ತಾಪತ್ರಯಗಳನ್ನು ತಿಳಿಸಿ ಮನಸ್ಸು ಹಗುರಾಗಿಸಿ ಕೊನೆಗೆ ಆತನನ್ನು ನೀರಲ್ಲಿ ಲೀನಗೊಳಿಸುವುದು ಗಣೇಶ ಹಬ್ಬದ ವೈಶಿಷ್ಟ್ಯ. ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ‍್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬ. ಅದೇ ರೀತಿ ಮಕ್ಕಳು ಸಹ ವಿಘ್ನನಿವಾರಕ, ಏಕದಂತ ವಿದ್ಯೆ ಬುದ್ದಿ ನೀಡುವ ಗಣೇಶನನ್ನು ಮಕ್ಕಳಾದ ನೀವು ಶ್ರದ್ದೆ, ಭಕ್ತಿಯಿಂದ ಪೂಜಿಸಿರಿ ಹಾಗೂ ಈ ಹಬ್ಬದ ಆಚರಣೆಯು ವರ್ಣ ರಂಜಿತವಾಗಿ ಅಲಂಕೃತವಾದ ಪೆಂಡಾಲಗಳಲ್ಲಿ ಗಣೇಶ ಮೂರ್ತಿಗಳನ್ನು ಸ್ಥಾಪಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಪ್ರಾಣ ಪ್ರತಿಷ್ಠಾಪನೆ, ಮಂತ್ರಗಳ ಪಠಣವು, ಗಣೇಶ ಉಪಸ್ಥಿತಿಯನ್ನು ಆಹ್ವಾನಿಸುತ್ತದೆ ಎಂದರು.
ಏಳು ದಿನಗಳ ನಿರಂತರ ಪೂಜೆಗಳನ್ನು ಗೈದು ಕೊನೆಯ ದಿನವಾದ ಇಂದು ಮಕ್ಕಳಿಗೆ ಹಾಗೂ ಪಾಲಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ನಂತರ ಶಾಲೆಯ ಮಕ್ಕಳು ಏಳು ದಿನಗಳ ಕಾಲ ಬೆಳಿಗ್ಗೆ ಹಾಗೂ ಸಾಯಂಕಾಲ ಗಣೇಶನಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಿದರು. ಈ ವೇಳೆಯಲ್ಲಿ ಶಾಲೆಯ ಮಕ್ಕಳು, ಶಿಕ್ಷಕರು, ಪಾಲಕರು ಹಾಗೂ ಬಡಾವಣೆಯ ಜನರು ಉಪಸ್ಥಿತರಿದ್ದರು.
