ಶೇರುದಾರ,ಗ್ರಾಹಕರೇ ನಮ್ಮ ಬ್ಯಾಂಕಿನ ಜೀವಾಳ : ಅಧ್ಯಕ್ಷ ಶಿವುಕುಮಾರ ಗುಂದಗಿ
ಆಲಮೇಲ:ಸೆ.೧೪:ಶೇರುದಾರರು ನಮ್ಮ ಉದ್ದೇಶಗಳ ಸ್ಪೂರ್ತಿಯ ಸೆಲೆ ನಮ್ಮ ವ್ಯವಹಾರಗಳಿಗೆ ಅವರು ಹೊರಗಿನವರಲ್ಲ,ಅವರು ನಮ್ಮ ವ್ಯವಹಾರದ ಮುಖ್ಯ ಅಂಗ,ಇದರ ಜೊತೆಗೆ ಗ್ರಾಹಕರು ಕೂಡಾ ನಮ್ಮ ಬ್ಯಾಂಕಿನ್ ಜೀವಾಳ ಎಂದು ಅಧ್ಯಕ್ಷ ಶಿವುಕುಮಾರ ಗುಂದಗಿ ಹೆಳಿದರು.
ಪಟ್ಟಣದಲ್ಲಿ ೧೫/೦೯/೨೦೨೪ ರವಿವಾರ ನಡೆಯಲ್ಲಿರುವ ಆಲಮೇಲ ಕೋ-ಆಪ್ರೇಟಿವ್ ಬ್ಯಾಂಕಿನ ಬೆಳ್ಳಿ ಮಹೋತ್ಸವ ಹಾಗೂ ವಾರ್ಷಿಕ ವರದಿ ಹಾಗೂ ಅಢಾವೆ ಕುರಿತು ಬ್ಯಾಂಕಿನ್ ಸಭಾ ಭವನದಲ್ಲಿ ಗುರುವಾರ ಸಾಯಂಕಾಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.
೧೯೯೭-೯೮ ರಲ್ಲಿ ಗದುಗಿನ ಜಗದ್ಗುರು ಲಿಂಗೈಕ್ಯ ಡಾ,ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಸ್ಥಾಪನೆಗೊಂಡ ಈ ಬ್ಯಾಂಕು ನಾವೆಲ್ಲರೂ ಇಂದು ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಮುನ್ನಡಿ ಬರೆಯುತ್ತಿದ್ದೇವೆ.ಒಂದು ಸಂತೋಷದ ಸಂಗತಿ ಏನೆಂದರೆ ಪ್ರಾರಂಭದಲ್ಲಿ ೧೦.೨೨ ಲಕ್ಷ ರೂಪಾಯಿ ಶೇರು ಬಂಡವಾಳದೊAದಿಗೆ ಪ್ರಾರಂಭವಾದ ನಮ್ಮ ಬ್ಯಾಂಕು ಇಂದು ೫೦ಕೋಟಿ ರೂಪಾಯಿಗೂ ಮೀರಿ ಬಂಡವಾಳ ಹೊಂದಿರುವುದಕ್ಕೆ ಕಾರಣ ಇಂದು ಗ್ರಾಹಕರ ಹೃದಯಕ್ಕೆ ಹತ್ತಿರವಾಗಿರುವುದು ಹಾಗೂ ಆತ್ಮೀಯವಾಗಿರುವುದು ಅದು ಸಹಕಾರದ ಉಳಿಕೆ ಹಾಗೂ ಬಳಕೆ ಎನ್ನುವ ಮಾತಿನ ಅರ್ಥದಲ್ಲಿ ಇದಕ್ಕೆಲ್ಲಾ ಶೇರುದಾರರ,ಗ್ರಾಹಕರ ಸೇವಾ ನೈಪುಣ್ಯ ಮತ್ತು ಆಡಳಿತ ಮಂಡಳಿಯವರ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಯವರ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆಯಿಂದಾಗಿ ಇಂದು ನಮ್ಮೂರು ಬ್ಯಾಂಕು ಪ್ರಗತಿ ಹೊಂದಲು ಸಾಧ್ಯವಾಗಿದೆ.
ಆನಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿ ವ್ಯವಸ್ಥೆಯು ಉತ್ತಮ ವೇದಿಕೆಯಾಗಿ ಆಲಮೆಲ ವಲಯಕ್ಕೆ ಸಂಜೀವಿನಿಯಾಗಿ ನಿಂತಿದೆ. ನಮ್ಮ ಬ್ಯಾಂಕು ಇಷ್ಟಕ್ಕೆ ಸೀಮಿತವಾಗಬಾರದೆಂದು ಇಂಡಿ ತಾಲೂಕಿನ ನಾದ ಕೆ,ಡಿ.ಸಿಂದಗಿ ಹಾಗೂ ವಿಜಯಪುರ ನಗರದಲ್ಲಿ ನಮ್ಮ ಬ್ಯಾಂಕಿನ ಶಾಖೆಗಳು ಕಾರ್ಯನಿರ್ವಹಿಸುತ್ತಿರುವುದು ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ.ಭವಿಷ್ಯದಲ್ಲಿ ಇನ್ನಷ್ಟು ಶಾಖೆಗಳನ್ನು ಪ್ರಾರಂಭಿಸಿ ಸೇವೆಗೈಯ್ಯಲು ನಮ್ಮ ಆಡಳಿತ ಮಂಡಳಿ ಉತ್ಸುಕವಾಗಿದೆ.ಶೇರಿದಾರರ ಸಹಕಾರದಿಂದ ಇಂದು ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಲು ಬಹಳ ಸಂತೋಷವೆನಿಸುತ್ತದೆ.ಸಮಾಜದ ಅಭಿವೃದ್ಧಿಗೆ ವಿಜ್ಞಾನ ತಂತ್ರಜ್ಞಾನ ಹಾಗೂ ಸಹಕಾರ ಕೊಡುಗೆಗಲು ಪೂರಕ ಎಂಬAತೆ ನಮ್ಮ ಬ್ಯಾಂಕಿನಲ್ಲಿ ಗ್ರಾಹಕರಿಗೆ ಉಚಿತವಾಗಿ ಆಟಿಜಿಎಸ್, ಎನ್ ಈ ಎಫ್ ಟಿ ಸೌಲಭ್ಯದ ಜೊತೆಗೆ ಎಸ್ ಎಮ್ ಎಸ್ ಬ್ಯಾಂಕಿAಗ,ಕೋರಬ್ಯಾAಕಿAಗ,ಸೇಫ್ ಡೆಪಾಸಿಟ್ ಲಾಕರ್ ಹಾಗೂ ಚೆಕ್ ಕಲೆಕ್ಷನ್ ಮತ್ತು ಕ್ಲಿಯರಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಾಗೂ ಇದರ ಜೊತೆಗೆ ಶೇರುದಾರರಿಗೆ ಡಿವಡೇಂಟ್ ಜೊತೆಗೆ ೧೦ ಗ್ರಾಂ ಬೆಳ್ಳಿ ನಾಣ್ಯವು ಕೂಡಾ ಕೊಡಲಾಗುವದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜೇಶ ಪಾಟೀಲ,ಪ್ರಧಾನ ವ್ಯವಸ್ಥಾಪಕ ನರೇಂದ್ರ ಬಾಸುತ್ಕರ್, ಶಾಖಾ ವ್ಯವಸ್ಥಾಪಕ ಅಶೋಕ ಮಸಳಿ ಇದ್ದರು.