೨೬ ಕ್ರೀಡಾಪಟುಗಳಿಗೆ ಸನ್ಮಾನ-ಡ್ರಾಮಾಜ್ಯೂನಿಯರ್‍ಸ್‌ರ ಹಾಸ್ಯರಸದೌತಣ
ಕೋಲಾರ,ಸೆ,೧೪:ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಸೆ.೧೩ ರ ಶುಕ್ರವಾರ ಸಂಜೆ ೬-೧೫ಕ್ಕೆ ನಡೆಯುವ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯ ೭೭ ಹಾಗೂ ಪಿಯುಸಿಯ ೧೨೫ ಮಂದಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.
ಜಿಲ್ಲಾಡಳಿತದ ಭವನದ ಮುಂಭಾಗ ಗುರುವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ೨೬ ಮಂದಿ ಕ್ರೀಡಾಪಟುಗಳು ಹಾಗೂ ಸಂಘದ ೬ ಮಂದಿ ನಿವೃತ್ತ ನಿರ್ದೇಶಕರನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲೆಯ ನೌಕರರು ವೈಯಕ್ತಿಕ ವಿಭಾಗದಲ್ಲಿ ೧೨ ಮಂದಿ ಹಾಗೂ ಗುಂಪು ಆಟಗಳಲ್ಲಿ ೧೪ ಮಂದಿ ಸಾಧನೆ ಮಾಡಿ ಜಿಲ್ಲೆಯ ಘನತೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ನೌಕರರ ಮಕ್ಕಳು ಶುಕ್ರವಾರ ಮಧ್ಯಾಹ್ನ ೪ ಗಂಟೆಗೆ ರಂಗಮಂದಿರದ ಆವರಣದಲ್ಲಿ ಹಾಜರಿದ್ದು, ನೋಂದಣಿ ಮಾಡಿಕೊಳ್ಳಬೇಕು ಎಂದು ಕೋರಿರುವ ಅವರು, ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅಕ್ರಂಪಾಷಾ ಉದ್ಘಾಟಿಸಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಎಂ.ವಿ.ರಾಮಕೃಷ್ಣಪ್ರಸಾದ್ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರೇರಣಾ ನುಡಿಗಳನ್ನಾಡುವರು ಎಂದು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ನೌಕರರ ಮಕ್ಕಳನ್ನು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಪುರಸ್ಕರಿಸಲಿದ್ದು, ಕ್ರೀಡಾಪಟುಗಳನ್ನು ಬೆಂಗಳೂರು ಪೂರ್ವವಲಯ ಡಿಸಿಪಿ ಡಿ.ದೇವರಾಜ್ ಸನ್ಮಾನಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ವಹಿಸುವರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್, ಕೆಜಿಎಫ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಹೆಚ್.ಪಿ.ಎಸ್.ಮೈತ್ರಿ ಹಾಜರಿರುವರು ಎಂದು ತಿಳಿಸಿದರು.
ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಜೆ ೬-೧೫ಕ್ಕೆ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನಾ ೪ ಗಂಟೆಯಿಂದಲೇ ಮಾಲೂರಿನ ರಂಗವಿಜಯ ತಂಡದಿಂದ ಹಾಗೂ ಡ್ರಾಮಾ ಜ್ಯೂನಿಯರ್‍ಸ್ ಖ್ಯಾತಿಯ ಚಿಣ್ಣರಿಂದ ಹಾಸ್ಯ ರಸದೌತಣ ಮೂಡಿಬರಲಿದೆ ಬಾಲಕಲಾವಿದರಾದ ವಿಷ್ಣು ವಿ.ಕುಣಿಗಲ್, ಲಿಖಿತ್ ಶ್ರೀಸಾಯಿ, ಸ್ವದೇಶ್ ಎಂ.ಅಂಗಡಿ, ಭಾರ್ಗವ್‌ಗೌಡ ಆರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿರಲಿದ್ದು, ಜಿಲ್ಲಾ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಎ.ಅಜಯ್‌ಕುಮಾರ್, ಖಜಾಂಚಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯ ಕೆ.ಗೌತಮ್, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಬಿ.ಅಶೋಕ್, ಕೆ.ಎನ್.ಮಂಜುನಾಥ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷರುಗಳಾದ ಸಿ.ಸುಬ್ರಮಣಿ,ಎಸ್.ನಂದೀಶ್‌ಕುಮಾರ್, ಪುರುಷೋತ್ತಮ್, ಬಿ.ಮಂಜುನಾಥ್, ರತ್ನಪ್ಪ,ತಾಲ್ಲೂಕು ಅಧ್ಯಕ್ಷರುಗಳಾದ ಸಿ.ಅಪ್ಪಯ್ಯಗೌಡ, ಕೆ.ಎನ್.ಅರವಿಂದ್, ವಿ.ಮುನಿಯಪ್ಪ,ಎಸ್.ವಿ.ಜನಾರ್ಧನ್,ಎಲ್.ನರಸಿಂಹಮೂರ್ತಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿರುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ,ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಲೆಕ್ಕಪರಿಶೋಧಕ ಅನಿಲ್,ಸರ್ವೇ ಇಲಾಖೆಯ ಸಂತೋಷ್, ಸುಭಾಷ್, ರವಿ ಮತ್ತಿತರರಿದ್ದರು.