ಡಾ. ಕೆ.ಎನ್.ನಾರಾಯಣ ಗೌಡರಿಗೆ ಪಿಎಚ್‌ಡಿ
ಕೋಲಾರ,ಸೆ.೧೪- ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರದ ನಿರ್ದೇಶಕ ಡಾ.ಕೆ.ಎನ್.ನಾರಾಯಣಗೌಡ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಡೆದ ೫೯ನೇ ಘಟಿಕೋತ್ಸವದಲ್ಲಿ ನಾರಾಯಣಗೌಡರಿಗೆ ಪಿಎಚ್‌ಡಿ ಪದವಿಯನ್ನು ಪ್ರಧಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಹಾಜರಿದ್ದರು. ಡಾ.ಸಾದಿತ್ ಆಲಿ ಖಾನ್ ಜಯ್ ಮಾರ್ಗದರ್ಶನದಲ್ಲಿ ನಾರಾಯಣಗೌಡರು ಮಂಡಿಸಿದ ಎಕ್ಸ್‌ಪರಿಮೆಂಟಲ್ ಇನ್‌ವೆಸ್ಟಿಗೇಷನ್ಸ್ ಆನ್ ರೀ ಸೈಕಲ್ಡ್ ಅಗ್ರಿಗೇಟ್ಸ್ ಫಾರ್ ಸಸ್ಟೇನಬಲ್ ಕಾಂಕ್ರೀಟ್ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಸಿಕ್ಕಿದೆ.
ಕೋಲಾರದ ನಿರ್ಮಿತಿ ಕೇಂದ್ರದ ಮುಖ್ಯಸ್ಥರಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿ ನಂತರ ರಾಜ್ಯ ಮಟ್ಟದ ಅಧಿಕಾರಿಯಾಗಿ ಬಡ್ತಿ ಪಡೆದುಕೊಂಡಿರುವ ಡಾ.ನಾರಾಯಣಗೌಡರು ವೃತ್ತಿಬದ್ಧತೆಗೆ ಹೆಸರಾಗಿದ್ದು ಜನಾನುರಾಗಿ ಮತ್ತು ಸೇವಾಪರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.